Site icon Suddi Belthangady

ಗೇರುಕಟ್ಟೆ: ಆಟೋ-ಚಾಲಕರ ಸಂಘದಿಂದ ಸರ್ಪ ಸಂಸ್ಕಾರ ಪೂಜೆ

ಗೇರುಕಟ್ಟೆ: ಸ್ನೇಹ ಸಂಗಮ ಆಟೋ ಚಾಲಕ-ಮಾಲಕ ಸಂಘದಿಂಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆಯು ಸೆ.12ರಂದು ನಡೆಯಿತು. ಇತ್ತೀಚೆಗೆ ಪರಪ್ಪು-ಕೊಯ್ಯೂರು ಟಾರು ರಸ್ತೆಯಲ್ಲಿ ನಾಗರಹಾವು ವಾಹನದಡಿಗೆ ಬಿದ್ದು ಸಾವನ್ನಪ್ಪಿತು. ಇದನ್ನು ಗಮನಿಸಿದ ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ-ಮಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ಸರ್ಪ ಸಂಸ್ಕಾರವನ್ನು ಮಾಡುವುದಾಗಿ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬಂದರು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವೃತ್ತ ದಾರಿಯಾಗಿ ಚಾಲಕ ವಿನಯ ಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ., ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಚಾಲಕರಾದ ಗಣೇಶ್ ಕೆ., ಓಬಯ್ಯ ಗೌಡ, ತಾರನಾಥ ಬಿ., ಶೇಖರ ಗೌಡ ಎಮ್., ರಮೇಶ್‌ ಪೂಜಾರಿ, ಸಂದೀಪ್ ಪಿ., ಕೀರ್ತಿ, ರೊನಾಲ್ಡೊ ಪಿಂಟೋ ಮತ್ತು ದಿಕ್ಷೀತ್ ಗೌಡ ಉಪಸ್ಥಿತರಿದ್ದರು.

Exit mobile version