Site icon Suddi Belthangady

ಸೋಮಂತಡ್ಕ-ದಿಡುಪೆ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಸಾರ್ವಜನಿಕರಿಂದ ಆಕ್ರೋಶ

ಉಜಿರೆ: ಸೋಮಂತಡ್ಕ – ದಿಡುಪೆ ರಸ್ತೆಯನ್ನು ಬಹಳ ವರ್ಷದ ಹಿಂದೆ ಈ ಭಾಗದ ಜನ ಹೋರಾಟದ ಮೂಲಕ ಪುನರ್ ರಚನೆ ಮಾಡಿಸಿಕೊಂಡಿದ್ದರು. ಸುಮಾರು 15 ವರ್ಷಗಳ ಹಿಂದೆ ಈ ಹೋರಾಟ ನಡೆಸಲಾಗಿದ್ದು, ಬಹಳ ದೀರ್ಘ ಬಾಳಿಕೆ ಬಂದ ರಸ್ತೆ ಸ್ಥಿತಿ ಇದೀಗ ತೀರಾ ಹದಗೆಟ್ಟಿದೆ. ಅದೇ ರಸ್ತೆಯಲ್ಲಿರುವ ಮೋರಿಯೊಂದು ಎರ್ಮಾಲ್ ಪಲ್ಕೆ ಬಳಿ ಕುಸಿದುರುವ ಕಾರಣದಿಂದ ಸ್ಥಳೀಯ ಜನ ಹಾಗೂ ವಾಹನ ಸವಾರರಿಗೆ ತೊಂದರೆ ಆಗದಿರಲಿ ಎನ್ನುವ ಸದುದ್ದೇಶದಿಂದ ಬಾಳೆ ಗಿಡ ನೆಟ್ಟಿದ್ದಾರೆ. ಈ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿಸಬೇಕೆಂದು ಆಗ್ರಹಿಸಿದರು.

Exit mobile version