ಬೆಳಾಲು: ಗ್ರಾಮದ ಓಡಿಪ್ರೊಟ್ಟು ನಿವಾಸಿ ಎಲ್ಯಣ್ಣ ಪೂಜಾರಿ ಅವರ ಮಗ ಉಮಾನಾಥ ಕೋಟ್ಯಾನ್( 46ವ ) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಬೆಳಾಲು ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷರಾಗಿ,
ಯುವವಾಹಿನಿ ಬೆಳ್ತಂಗಡಿ ಘಟಕದ ಸಲಹೆಗಾರರಾಗಿದ್ದು, ಬೆಳಾಲು ಶ್ರೀ ನಾರಾಯಣ ಗುರು ಸಮಿತಿ, ಯುವ ಬಿಲ್ಲವ ವೇದಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಇವರು ಪತ್ನಿ ವೀಣಾ, ಪುತ್ರಿ, ತಂದೆ, ತಾಯಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.