Site icon Suddi Belthangady

ಧರ್ಮಸ್ಥಳದಲ್ಲಿ ನಡೆದ 4 ಅಸಹಜ ಸಾವುಗಳ ಬಗ್ಗೆ ಅನುಮಾನ-ಎಸ್.ಐ.ಟಿ.ಗೆ ದೂರು ನೀಡಿದ ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ 2006ರಿಂದ 2010ರ ನಡುವಲ್ಲಿ ನಡೆದ ನಾಲ್ಕು ಸಾವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ,ತನಿಖೆಗೆ ಒತ್ತಾಯಿಸಿ ಮಹೇಶ್ ಶೆಟ್ಟಿ ತಿಮರೋಡಿ ಎಸ್.ಐ.ಟಿ ಗೆ ದೂರು ನೀಡಿದ್ದಾರೆ.

28-02-2006, 13-04-2006, 03-08-2007 ಮತ್ತು 28-09-2010 ರಲ್ಲಿ ಧರ್ಮಸ್ಥಳದ ವಸತಿಗೃಹಗಳಲ್ಲಿ ಪತ್ತೆಯಾದ ಅನಾಥ ಶವಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಧಫನ್ ಮಾಡಿದೆ. ಇದರ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಬೇಕೆಂದು ಮಹೇಶ್ ಶೆಟ್ಟಿ ತಿಮರೋಡಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಗೆ ನೀಡಿದ ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version