ಉಜಿರೆ: ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಕೆ. ಸುರೇಶ್ ಗೌಡ ಇವರ ಅಧ್ಯಕ್ಷತೆಯಲ್ಲಿ ಸೆ. 10ರಂದು ಉಜಿರೆ ಶಾರದಾ ಮಂಟಪದಲ್ಲಿ ಜರಗಿತು. ಆರ್ಥಿಕ ವರ್ಷದಲ್ಲಿ ಸಂಘ ರೂ. 759199/ ನಿವ್ವಳ ಲಾಭ ಗಳಿಸಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ. ಕ. ಜಿಲ್ಲಾ ಹಾಲು ಒಕ್ಕೂಟ ದ ಬೆಳ್ತಂಗಡಿ ವಿಸ್ತರಣಾ ಧಿಕಾರಿ ಸಂದೀಪ್ ಜೈನ್, ದ. ಕ. ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ. ಗಣಪತಿ ಭಟ್ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ಸತೀಶ್ ಕೆ., ಪುರುಷೋತ್ತಮ ಬಿ. ಎಸ್., ಕೇಶವ, ಕೇಶವ ಗೌಡ, ಅನಿಲ್ ಡಿಸೋಜ, ಸಂತೋಷ್ ಎಂ., ಜಯಶ್ರೀ ಪ್ರಕಾಶ್, ನಾಗವೇಣಿ, ಶಶಿಕಲಾ, ಬೇಬಿ, ಕಿಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ 19 ಮಕ್ಕಳನ್ನು ಸನ್ಮಾನಿಸಲಾಯಿತು. ಈ ವರ್ಷದಲ್ಲಿ
ಸಂಘಕ್ಕೆ ಅತೀ ಹೆಚ್ಚು ಹಾಲು ಒದಗಿಸುವ ಸದಸ್ಯರುಗಳಾದ ಎಂ. ಚಂದ್ರಾಧರ, ನೋಬರ್ಟ್ ಡಿಸೋಜ, ಹಿಲಾರಿ ಡಿಸೋಜ, ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಾದ ನಿಶ್ಮಿತಾ ಎಸ್. ನಾಯ್ಕ್, ಆಫ್ರಿನಾ, ಶ್ರಣ್ಯ, ಮನಿಶ್, ರಿತೇಶ್ ಕೆ. ಪಿ., ಪುನೀತ್ ಆರ್., ರಚನಾ, ದೀಕ್ಷಿತ್, ಮನೀಶ್, ಅನ್ವಿತಾ, ಮನೀಶ್, ಮಹಮ್ಮದ್ ತಮಿಮುದ್ದಿನ್, ದೀಕ್ಷಾ, ಸಾತ್ವಿಕ್ ಎಂ., ಸುದರ್ಶನ್ ಎಸ್., ಮಲ್ಲಿಕಾ, ಆತ್ಮಿ ಬಿ., ಅಂಕಿತಾ ಕೆ, ಮಧುರ ಇವರನ್ನು ಗೌರವಿಸಲಾಯಿತು. ಎಸ್. ನಾಯ್ಕ್, ಆಫ್ರಿನಾ, ಶ್ರಣ್ಯ, ಮನಿಶ್, ರಿತೇಶ್ ಕೆ. ಪಿ., ಪುನೀತ್ ಆರ್., ರಚನಾ, ದೀಕ್ಷಿತ್, ಮನೀಶ್, ಅನ್ವಿತಾ, ಮನೀಶ್, ಮಹಮ್ಮದ್ ತಮಿಮುದ್ದಿನ್, ದೀಕ್ಷಾ, ಸಾತ್ವಿಕ್ ಎಂ., ಸುದರ್ಶನ್ ಎಸ್., ಮಲ್ಲಿಕಾ, ಆತ್ಮಿ ಬಿ., ಅಂಕಿತಾ ಕೆ, ಮಧುರ ಇವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯಲತಾ ವರದಿ ವಾಚಿಸಿದರು. ನಿರ್ದೇಶಕರಾದ ಪುರುಷೋತ್ತಮ ಬಿ. ಎಸ್. ಸ್ವಾಗತಿಸಿ, ಪ್ರಕಾಶ್ ಗೌಡ ಕೆದ್ಲ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೆ. ವಂದಿಸಿದರು.