ಬೆಳ್ತಂಗಡಿ: ಸುಲ್ಲೇರಿಮೊಗ್ರು ಗ್ರಾಮದ ನಿರ್ಮಲ್ ಕಟ್ಟೆ ಎಂಬಲ್ಲಿ ಮನೆಯಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ನಿವಾಸಿ ನಾರಾಯಣ ಮಡಿವಾಳ ಅವರು ಈ ಬಗ್ಗೆ ದೂರು ನೀಡಿದ್ದಾರೆ. ಮನೆಯ ಮಹಡಿಯ ಮೇಲಿನ ಕೋಣೆಯಲ್ಲಿ ಸುಲಿದ ಒಣ ಅಡಿಕೆಯನ್ನು ಇಟ್ಟಿದ್ದರು. ಕಳ್ಳರು ಕೋಣೆಯ ಬಾಗಿಲಿನ್ನು ತೆಗೆದು ಒಳಗೆ ಇರಿಸಲಾಗಿದ್ದ ಅಡಿಕೆ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಕಳ್ಳತನವಾದ ಅಡಿಕೆಯ ಮೌಲ್ಯ ಸುಮಾರು 20,000 ಎಂದು ಅಂದಾಜಿಸಲಾಗಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿರ್ಮಲ ಕಟ್ಟೆಯಲ್ಲಿ ಮನೆಯಿಂದ ಅಡಿಕೆ ಕಳ್ಳತನ ಪ್ರಕರಣ ದಾಖಲು
