ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಯುವಕರಿಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ. ಆರೋಪಿಗಳಾದ ಬಾರ್ಯ ಗ್ರಾಮದ ಸೂರ್ಯ ನಿವಾಸಿ ಮಹಮ್ಮದ್ ಸಿನಾನ್ (25) ಮತ್ತು ಇಳಂತಿಲ ಗ್ರಾಮದ ರಿಫಾಯಿ ನಗರ ಮನೆ ನಿವಾಸಿ ಮಹಮ್ಮದ್ ಜಿಯಾದ್ (23) ಬಂಧಿತರು. ಇವರಿಬ್ಬರು ಉಪ್ಪಿನಂಗಡಿಯ ಹಿರೆಬಂಡಾಡಿ ಕ್ರಾಸ್ ರಸ್ತೆಯ ಬಳಿ ಶಾಲೆಯ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಾಧಾರದಲ್ಲಿ ಗಸ್ತು ನಿರತ ಎಸೈ ಅವಿನಾಶ್ ಅವರ ತಂಡವು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟ ಕಾರಣಕ್ಕೆ ಅವರಿಬ್ಬರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾದಕ ವಸ್ತು ಸೇವನೆ: ಇಬ್ಬರು ಪೊಲೀಸ್ ವಶಕ್ಕೆ
