Site icon Suddi Belthangady

ಬಳಂಜ: ಖೋ ಖೋ ಪಂದ್ಯಾಟ- ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಳಂಜ: ವೇಣೂರಿನಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರತಿಕ್ಷಾ, ಶ್ರೇಯ, ಹಾರ್ಥಿಕ ಮತ್ತು ಶ್ರಾವ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದು, ಕುಣಿತ ಭಜನೆಯಲ್ಲಿ ಹೆಸರನ್ನು ಪಡೆದಿದ್ದಾರೆ. ಪ್ರತಿಕ್ಷಾ ಬೆಸ್ಟ್ ರನ್ನರ್ ಹಾಗೂ ಶ್ರೇಯ ಬೆಸ್ಟ್ ಚೇಸರ್ ಪ್ರಶಸ್ತಿಗೆ ಭಾಜನರಾಗಿದ್ದು ಇವರ ಸಾಧನೆಗೆ ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version