ಉಜಿರೆ: ಶ್ರೀ.ಧ.ಮಂ.ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯಕೀಯ ಮಾಹಿತಿ ಕಾರ್ಯಕ್ರಮ ನಡೆಯಿತು. ಜೂನಿಯರ್ ರೆಡ್ ಕ್ರಾಸ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಬಿ.ವೈ.ಎನ್.ಎಸ್ ಸಂಸ್ಥೆಯ ಕಿರಿಯ ವೈದ್ಯರಾದ ಡಾ. ಅಭಯ ಹಾಗೂ ಡಾ.ಆರ್ಷಾದ್ ‘ಹದಿಹರೆಯದ ವರ್ತನೆಗಳು ಹಾಗೂ ಬದಲಾವಣೆಗಳು’ ಮತ್ತು ‘ಹದಿಹರೆಯದ ದೇಹಕ್ಕೆ ಅರೋಗ್ಯಕರ ಆಹಾರ’ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿಯಾದ ಡಾ. ಬಾಲಕೃಷ್ಣ ಉಪಸ್ಥಿತರಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಕ್ಲಬ್ ನ ಸಂಯೋಜಕ ಕಾಲೇಜಿನ ರಾಸಾಯನ ಶಾಸ್ತ್ರದ ಉಪನ್ಯಾಸಕ ಪ್ರಶಾಂತ್ ಪೂಜಾರಿ ಹಾಗೂ ಇಂಗ್ಲೀಷ್ ವಿಭಾಗದ ಉಪನ್ಯಾಸಕ ಪಾರ್ಶ್ವನಾಥ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.