ಧರ್ಮಸ್ಥಳ: ಇಂಡಿಯನ್ ಬ್ಯಾಂಕ್ ಕನ್ಯಾಡಿ ಶಾಖೆಯಲ್ಲಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮತ್ತು ಗ್ರಾಹಕ ಸಮಾವೇಶ ನಿಮ್ಮೊಂದಿಗೆ ನಾವು ಕಾರ್ಯಕ್ರಮ ಬ್ಯಾಂಕ್ ನಲ್ಲಿ ನಡೆಯಿತು. ಸಭೆಯಲ್ಲಿ ಶಾಖಾಧಿಕಾರಿ ಶ್ರೀನಿವಾಸ ಎನ್. ಗ್ರಾಹಕರ ದಿನಾಚರಣೆಯ ಉದ್ದೇಶ ವಾರ್ಷಿಕ ವ್ಯವಹಾರದ ಕುರಿತು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹಿರಿಯ ನಾಗರಿಕಾ ಗ್ರಾಹಕ ಪ್ರಭಾಕರ್ ಸಿ. ಜಿ., ರಾಮಕೃಷ್ಣ ಭಟ್ ಜಿ. ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇತರ ಗ್ರಾಹಕರು ಉಪಸ್ಥಿತರಿದ್ದರು. ಲತಾ ಕಾರ್ಯಕ್ರಮ ನಿರೂಪಿಸಿ, ಸೀತಾರಾಮ್ ಜಿ. ವಂದಿಸಿದರು.
ಕನ್ಯಾಡಿ: ಇಂಡಿಯನ್ ಬ್ಯಾಂಕ್ ನಲ್ಲಿ ಗ್ರಾಹಕರ ಸಮಾವೇಶ
