ಚಾರ್ಮಾಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ಸಂಘಟನಾ ದೃಷ್ಟಿಯಿಂದ ಸೆ.9ರಂದು ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಶಕ್ತಿಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಾರ್ಮಾಡಿಯ ಹಿರಿಯ ಕಾರ್ಯಕರ್ತ ತಮ್ಮಯ್ಯ ಗೌಡ ಬಲ್ಲಂಡ, ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಗೋಪಾಲ ಕೃಷ್ಣ ಇರ್ವತ್ರಾಯ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಸಹಕಾರ ಪ್ರಕೋಷ್ಠದ ವಕ್ತಾರರಾದ ಅಜಿತ್ ಕುಮಾರ್ ಅರಿಗ ಉದ್ಘಾಟನಾ ಭಾಷಣ ಮಾಡಿದರು. ಬಿಜೆಪಿ ವಕ್ತಾರರಾದ ನಂದಕುಮಾರ್ ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯದಲ್ಲಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ ಬೂತ್ ಆಡಳಿತದಲ್ಲಿ ನಮ್ಮ ಪಾತ್ರ ವಿಷಯದಡಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು ವಿಕಸಿತ ಭಾರತ ಅಮೃತ ಪರ್ವ ವಿಷಯದಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ತಿಳಿಸಿದರು. ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಗೌಡ ಪುದುವೆಟ್ಟು ಬೂತ್ ಮಟ್ಟದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸಮಾರೋಪ ಭಾಷಣ ಮಾಡಿದರು. ಮಂಡಲ ಉಪಾಧ್ಯಕ್ಷ, ಅಭ್ಯಾಸ ವರ್ಗ ಸಂಚಾಲಕ ಕೊರಗಪ್ಪ ಗೌಡ ಚಾರ್ಮಾಡಿ, ಅಭ್ಯಾಸ ವರ್ಗದ ಪ್ರಭಾರಿ ಚನ್ನಕೇಶವ ಮುಂಡಾಜೆ, ಚಾರ್ಮಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ಶಕ್ತಿ ಕೇಂದ್ರದ ಪ್ರಮುಖರಾದ ಗಣೇಶ್ ಕೋಟ್ಯಾನ್, ಓಬಯ್ಯ ಗೌಡ, ಲಕ್ಷ್ಮಣ ಗೌಡ ಪೆರಿಯಡ್ಕ, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಪಕ್ಷದ ಪಕ್ಷದ ಅನ್ಯನ್ಯ ಜವಾಬ್ದಾರಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ರಾಜೇಶ್ ಕುಮಾರ್ ಚಾರ್ಮಾಡಿ ಪ್ರಾರ್ಥನೆಗೈದು, ದಿವಿನೇಶ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.