Site icon Suddi Belthangady

ಟೀಂ ಅಭಯಹಸ್ತದಿಂದ ಅರ್ಹರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಎಂಟು ವರ್ಷಗಳಿಂದ ಸಮಾಜಮುಖಿ ಸೇವಾಕಾರ್ಯಗಳಲ್ಲಿ ತೊಡಗಿರುವ ಸಂದೀಪ್ ಎಸ್. ನೀರಲ್ಕೆ ಅರ್ವ ಅವರ ಸಾರಥ್ಯದ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಬೆಳ್ತಂಗಡಿಯಿಂದ “ಸ್ವಾವಲಂಬನಾ” ಯೋಜನೆಯಡಿ ವೃತ್ತಿ ನಿರತ ಹಾಗೂ ಅರ್ಹ ಫಲಾಸಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಪ್ರವೀಣ ಮಯ್ಯ, ಸಮಿತಿಯ ಸಲಹೆಗಾರರು, ಹಿರಿಯ ಕ್ರೀಡಾಪಟು ಉಮೇಶ್ ಸುವರ್ಣ, ರಂಗಭೂಮಿ ಕಲಾವಿದ/ಬಡಗಕಾರಂದೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಕುಲಾಲ್ ಕೆದ್ದು ಅವರು ಹಸ್ತಾಂತರಗೈದು ಶುಭ ಹಾರೈಸಿದರು.

ಬಡಗಕಾರಂದೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಪೂಜಾರಿ, ಸತ್ಯದೇವತಾ ಎಲೆಕ್ಟ್ರಿಕಲ್ಸ್ ಮಾಲಕ ಜಗದೀಶ್ ಪೂಜಾರಿ, ಸ್ವಾವಲಂಬನಾ ಯೋಜನೆಯ ಸಲಹೆಗಾರ ಮಹಮ್ಮದ್ ಇಸಾಕ್, ಪ್ರಮುಖರಾದ ಶ್ರೀನಾಥ್ ಶೆಟ್ಟಿ, ಇರ್ಷಾದ್ ಶಿರ್ಲಾಲು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Exit mobile version