Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ತೆನೆ ಹಬ್ಬ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಮೇರಿ ಮಾತೆಯ ಜನ್ಮ ದಿನವನ್ನು ಸೆ. 8ರಂದು ಮೊಂತಿ(ತೆನೆ ಹಬ್ಬ) ಹಬ್ಬವಾಗಿ ಆಚರಿಸಿದರು. ಚರ್ಚ್‌ಗಳಲ್ಲಿ ಬಲಿಪೂಜೆಯಲ್ಲಿ ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಸವಿದಿದ್ದಾರೆ.

ಮೊಂತಿ ಹಬ್ಬದಂದು ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ, ಪ್ರಧಾನ ದಿವ್ಯ ಬಲಿಪೂಜೆ ನಡೆಯಿತು. ಬಲಿ ಪೂಜೆ ಧರ್ಮಗುರು ಫಾ. ಮೇಲ್ವಿನ್ ನೋರೋನ್ಹ ಅರ್ಪಿಸಿದರು. ಮಡಂತ್ಯಾರು ಚರ್ಚ್ ನ ಸಹಾಯಕ ಧರ್ಮಗುರು ಫಾ.ಲೇರಿನ ಪಿಂಟೊ ಸಂದೇಶ ನೀಡಿದರು. ಮಡಂತ್ಯಾರು ಚರ್ಚ್ ನ ಪ್ರಧಾನ ಧರ್ಮಗುರು ಫಾ. ಸ್ಟ್ಯಾಂನಿ ಗೋವಿಸ್, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಫಾ. ದೀಪಕ್ ಡೆಸಾ, ಅನಿಲ್ ಪಾಯ್ಸ್ ಹಾಗೂ ಇನ್ನಿತರ ಧರ್ಮ ಗುರುಗಳು ಉಪಸ್ಥಿತರಿದ್ದರು.

ಬಳಿಕ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಸಲ್ಲಿಸಿದ ಪುಟಾಣಿಗಳಿಗೆ ಕಬ್ಬು ವಿತರಿಸಲಾಯಿತು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆರ್ಥಿಕ ಸಮಿತಿ ಸದಸ್ಯರು, ಗುರಿಕಾರರು, ಚರ್ಚ್ ಪಾಲನ ಮಂಡಳಿ ಸದಸ್ಯರು, ಮುಖಂಡರು ಸಹಕರಿಸಿದರು.

Exit mobile version