ಕಲ್ಮಂಜ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆ. 7ರಂದು ಕಲ್ಮಂಜ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನಡೆಯಿತು.
ಪಕ್ಷದ ಹಿರಿಯ ಕಾರ್ಯಕರ್ತ ಬಾಲಚಂದ್ರರಾವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಶಾಸಕ ಹರೀಶ್ ಪೂಂಜಾ ಅವರು ಉದ್ಘಾಟನಾ ಭಾಷಣ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಾಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು.
ಶಶಿಧರ್ ಎಂ. ಕಲ್ಮಂಜ ಅವರು ಸ್ವಾಗತಿಸಿದರು. ಪಕ್ಷದ ಪ್ರಮುಖರಾದ ರವಿ ಇಳಂತಿಲ, ಜಯಂತ್ ಕೋಟ್ಯಾನ್ ಮೋಹನ್ ಅಂಡಿಂಜೆ ಬೈಠಕ್ ತೆಗೆದುಕೊಂಡರು. ಕೃಷ್ಣಪ್ಪ ಗುಡಿಗಾರ್ ಸಮಾರೋಪ ಭಾಷಣ ಮಾಡಿದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮಂಜ ಶಕ್ತಿ ಕೇಂದ್ರ ಪ್ರಭಾರಿ ಪೂರ್ಣಿಮಾ ಜಯಂತ್, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವoತ್ ಗೌಡ ಪುದುವೆಟ್ಟು, ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಕಲ್ಮoಜ ಶಕ್ತಿ ಕೇಂದ್ರ ಪ್ರಮುಖ್ ಶ್ರೀಧರ್ ಎಂ. ಕಲ್ಮಂಜ, ಹಿರಿಯರಾದ ರವಿ ಭಟ್, ಕೆಂಪಯ್ಯ ಮಡಿವಾಳ, ಕಲ್ಮoಜ ಪಂಚಾಯತ್ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷೆ ಪೂರ್ಣಿಮಾ, ಅನಿಲ್ ಗೌಡ, ಪಕ್ಷದ ಅನ್ಯನ್ಯ ಜವಾಬ್ದಾರಿ ಇರುವ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಗೀತೆ ಚೇತನ್ ಗುಡಿಗಾರ್ ಅವರು ಹಾಡಿದರು. ಲೋಹಿತ್ ಅವರು ನಿರೂಪಣೆ ಮಾಡಿ, ಧನ್ಯವಾದವಿತ್ತರು.