Site icon Suddi Belthangady

ಉಜಿರೆ: ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಉಜಿರೆ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆ.8ರಂದು ಉಜಿರೆ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಶಾರದಾ ಮಂಟಪ ಸಭಾಭವನದಲ್ಲಿ ನಡೆಯಿತು.

ಪಕ್ಷದ ಹಿರಿಯ ಕಾರ್ಯಕರ್ತ ರಘುನಾಥ್ ಶೆಣೈ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಉದ್ಘಾಟನಾ ಭಾಷಣ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಾಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು.

ಪಕ್ಷದ ಪ್ರಮುಖರಾದ ನಂದಕುಮಾರ್, ಕೃಷ್ಣಮೂರ್ತಿ, ವೃಷಾoಖ್ ಖಾಡಿಲ್ಕರ್ ಬೈಠಕ್ ತೆಗೆದುಕೊಂಡರು. ದಿನಕರ್ ಕುಲಾಲ್ ಅವರು ಸಮಾರೋಪ ಭಾಷಣ ಮಾಡಿದರು. ಮಂಡಲ ಅಭ್ಯಾಸವರ್ಗ ಸಂಚಾಲಕ ಕೊರಗಪ್ಪ ಗೌಡ ಅರಣೆಪಾದೆ, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವoತ್ ಗೌಡ ಪುದುವೆಟ್ಟು, ಪ್ರಧಾನ ಕಾರ್ಯದರ್ಶಿ ನಿರಂಜನ್, ಕೇಶವ ಭಟ್ ಅತ್ತಾಜೆ, ಪುಷ್ಪಾವತಿ ಆರ್. ಶೆಟ್ಟಿ, ಭಾಸ್ಕರ ಆಚಾರ್ಯ, ಶಕ್ತಿ ಕೇಂದ್ರ ಪ್ರಮುಖರಾದ ಪಂಚಾಯತ್ ಸದಸ್ಯೆ ಶಶಿಕಲಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಮಿಲ್ಕ್ ಸೊಸೈಟಿ ನಿರ್ದೇಶಕರುಗಳು, ಪಂಚಾಯತ್ ಸದಸ್ಯರು ಗಳು, ಬೂತ್ ಪದಾಧಿಕಾರಿಗಳು, ಪಕ್ಷದ ಅನ್ಯನ್ಯ ಜವಾಬ್ದಾರಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಜಿರೆ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಸ್ವಾಗತಿಸಿ, ಬಿಜೆಪಿ ಗೀತೆ ಸಂಧ್ಯಾ ಹಾಗೂ ಸಂಘದ ಗೀತೆ ಜಯಲಕ್ಷ್ಮೀ ಅವರು ಹಾಡಿದರು. ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್ ಕಾರ್ಯಕ್ರಮ ನಿರೂಪಿಸಿ, ಉಜಿರೆ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು ಅವರು ಧನ್ಯವಾದವಿತ್ತರು.

Exit mobile version