Site icon Suddi Belthangady

ಉಜಿರೆ: ಶ್ರೀ ಧ.ಮಂ.ಅ.ಸೆ. ಶಾಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ ಮಾಹಿತಿ ಕಾರ್ಯಗಾರ

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ರಾಷ್ಟಿಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ ಮಾಹಿತಿ ಕಾರ್ಯಗಾರ ಪರಿಸರ ಸಂಘದಿಂದ ನಡೆಯಿತು. ಬೆಂಗಳೂರು ಎನ್.ಡಿ.ಆರ್.ಎಫ್. ಇನ್ಸ್ ಪೆಕ್ಟರ್ ಶಾಂತಿಲಾಲ್ ಜಟ್ಟಿ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ರಾಷ್ಟಿಯ ವಿಪತ್ತು ಪ್ರತಿಕ್ರಿಯೆ ಪಡೆ ಕೆಲಸ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು.

ಹೆಡ್ ಕಾನ್ಸ್ ಸ್ಟೇಬಲ್ ಶಂಕರಪ್ಪ ಇದರ ಮುಖ್ಯ ಕರ್ತವ್ಯಗಳು, ಭೂಕಂಪ, ನೆರೆ ಸುನಾಮಿ, ಚಂಡಮಾರುತ, ಅಗ್ನಿ ಅವಘಡ, ಅಣುದುರಂತ, ತುರ್ತು ವೈದ್ಯಕೀಯ ನೆರವು ವಿಪತ್ತು ಸಂಭವಿಸಿದ ಪ್ರದೇಶದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಚರಣೆ, ಇವುಗಳ ಬಗ್ಗೆ ಮಾಹಿತಿ ನೀಡಿದರು. ಹೆಡ್ ಕಾನ್ಸ್ ಸ್ಟೇಬಲ್ ಗಳಾದ ದಿವಕರ್ ರೆಡ್ಡಿ, ಅಲ್ಬಿನ್, ಸತೀಶ್ ನಾಯ್ಕ್, ಸಿರಿಲಾಲ್ ಅವರು ಯಾವ ರೀತಿ ಅಪಘಾತಗಳು ಸಂಭವಿಸಿದಾಗ ಮುನ್ನೇಚರಿಕೆ ಕ್ರಮವನ್ನು ಡೆಮೋ ಮಾಡಿ ತೋರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯ ಸುರೇಶ್ ಕೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಪ್ರಯೋಜನೆಗಳನ್ನು ವಿವರಿಸಿದರು. ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿ ಮಾನ್ಯ ಸ್ವಾಗತಿಸಿರು. ರಕ್ಷಿತಾ ವಂದಿಸಿದರು. ಶ್ರುತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Exit mobile version