Site icon Suddi Belthangady

ಬೆಳ್ತಂಗಡಿ: ಗುರುದೇವ ಸಹಕಾರದ ಅಧ್ಯಕ್ಷ ಭಗೀರಥ ಜಿ. ಅವರಿಗೆ ಪುತ್ತೂರು ಬಿಲ್ಲವ ಸಂಘದಲ್ಲಿ ಸನ್ಮಾನ

ಬೆಳ್ತಂಗಡಿ: ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷ ನೋಟರಿ ವಕೀಲ ಭಗೀರಥ ಜಿ. ಅವರನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಮಂದಿರದಲ್ಲಿ ಸೆ. 7ರಂದು ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಗುರು ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜ, ಗೌರವಾಧ್ಯಕ್ಷ ಗೋಪಾಲಕೃಷ್ಣ ನೆಕ್ಕಿತಪುಣಿ, ವಿಟ್ಲ ಮಾಜಿ ಶಾಸಕ ರುಕ್ಮಿಯ್ಯ ಪೂಜಾರಿ, ಬಂಟ್ವಾಳ ಇಂಜಿನಿಯರ್ ತಾರಾನಾಥ ಸಾಲಿಯಾನ್, ಸ್ಮಿತೇಶ್ ಬಾರ್ಯ, ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಕೆ. ಪಿ. ದಿವಾಕರ, ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಡೆಂತ್ಯಾರು, ಪುತ್ತೂರು ಶಾಖೆಯ ವ್ಯವಸ್ಥಾಪಕರು ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version