ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನ ಹೊತ್ತಿಟ್ಟಿದ್ದೇನೆ ಅಂತ ಹೇಳಿದ ವ್ಯಕ್ತಿಯ ಪ್ರಕರಣ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ. ಸಾಕ್ಷಿ ದೂರುದಾರನಾಗಿ,ಮುಸುಕು ದಾರಿಯಾಗಿ ಆಗಮಿಸಿ 17 ಸ್ಥಳಗಳಲ್ಲಿ ಉತ್ಖನನಕ್ಕೆ ಕಾರಣವಾದ ವ್ಯಕ್ತಿ ,ತದ ಬಳಿಕ ಆರೋಪಿ ಚಿನ್ನಯ್ಯನಾಗಿ ಎಸ್ಐಟಿಯ ಕಸ್ಟಡಿಯಲ್ಲಿದ್ದು, ಸೆ. ಆರರಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ. ಈ ಎಲ್ಲಾ ಪ್ರಕ್ರಿಯೆಗಳ ನಂತರ ಸೆಪ್ಟೆಂಬರ್ ಆರರಂದು ಸಂಜೆ ಸೌಜನ್ಯ ಮಾವ ವಿಠಲ ಗೌಡರನ್ನು ಕರೆದುಕೊಂಡು ಬಂದ ಎಸ್ಐಟಿ ಅಧಿಕಾರಿಗಳು ನೇತ್ರಾವತಿಯ ಬಂಗ್ಲೆ ಗುಡ್ಡೆಯಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಇದಾದ ಬಳಿಕ ಇಂದು ಬಂಗ್ಲೆ ಗುಡ್ಡೆಯ ಸುತ್ತ ಪೊಲೀಸ್, ಎ ಎನ್ ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.ಇದು ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ ಮಹಜರು ನಡೆಯುತ್ತಾ ಅನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಮತ್ತೆ ಉತ್ಖನನ ಕಾರ್ಯ ನಡೆಯುತ್ತಾ ಅನ್ನುವ ಪ್ರಶ್ನೆಗಳು ಹುಟ್ಟುವುದಕ್ಕೆ ಕಾರಣವಾಗಿದೆ.ಈ ಬಗ್ಗೆ ಸ್ಪಷ್ಟತೆ ನಾಳೆ ಸಿಗುವ ಸಾಧ್ಯತೆಯಿದೆ.
ಮತ್ತೆ ಕುತೂಹಲ ಕೆರಳಿಸಿದ ನೇತ್ರಾವತಿಯ ಬಂಗ್ಲೆಗುಡ್ಡೆ- ಸುತ್ತಮುತ್ತ ಪೊಲೀಸ್, ಎ.ಎನ್.ಎಫ್ ಪಡೆಯ ನಿಯೋಜನೆ- ನಾಳೆ ನಡೆಯುತ್ತಾ ಮತ್ತೆ ಮಹಜರು?
