ಮೇಲಂತಬೆಟ್ಟು: ಪಕ್ಕಿದಕಲ ನವೋದಯ ಯುವಕ & ಯುವತಿ ಮಂಡಲದ 27ನೇ ವರ್ಷದ ಸಾರ್ವಜನಿಕ ಆಟೋಟ ಸ್ಪರ್ಧೆ ಹಾಗೂ ಮೋಟೋಕ್ರಾಸ್ 2025ರ ಪೋಸ್ಟರನ್ನು ಮಂಡಲದ ಗೌರವಾಧ್ಯಕ್ಷ ಮನೋಹರ್ ಪಡಿವಾಳ್ ಬಿಡುಗಡೆಗೊಳಿಸಿದರು.
ಗೌರವಾಧ್ಯಕ್ಷರ ಸಹೋದರ ಜಗದೀಶ್ ಪಡಿವಾಳ್, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಬೆಳ್ತಂಗಡಿ ತಾಲೂಕಿನ ಖ್ಯಾತ ಯೂಟ್ಯೂಬರ್ ರೈಡಿಂಗ್ ಜೋಡಿ ಉಪಸ್ಥಿತರಿದ್ದರು.

