Site icon Suddi Belthangady

ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ-ರೂ.80 ಕೋಟಿ ವ್ಯವಹಾರ, ರೂ.40 ಲಕ್ಷ ನಿವ್ವಳ ಲಾಭ, 10 ಶೇಕಡಾ ಡಿವಿಡೆಂಡ್-ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದೇವೆ: ಹೆಚ್ ಪದ್ಮಗೌಡ-ಎರಡು ಶಾಖೆಯನ್ನು ತೆರೆಯಲು ಚಿಂತನೆ: ಕುಶಾಲಪ್ಪ ಗೌಡ ಪೂವಾಜೆ

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡ ಅಧ್ಯಕ್ಷತೆಯಲ್ಲಿ ಸೆ.7ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪದ್ಮ ಗೌಡ ಮಾತನಾಡಿ ಸಂಘವು ಆರು ವರ್ಷಗಳಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ, ಜಾಮೀನು ಖರೀದಿ ಸಾಲ, ಗೃಹ ಸಾಲ ಹಾಗೂ ಇನ್ನಿತರ ಸಾಲಗಳನ್ನು ನೀಡುತ್ತಿದ್ದೇವೆ. ಸೋಮಂತಡ್ಕ ಹಾಗೂ ಕಲ್ಲೇರಿ ಎರಡು ಶಾಖೆಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಸಂಘವು ಪ್ರಸಕ್ತ ಸಾಲಿನಲ್ಲಿ 80 ಕೋಟಿ ವ್ಯವಹಾರ ನಡೆಸಿ, 40 ಲಕ್ಷ ನಿವ್ವಳ ಲಾಭಗಳಿಸಿದೆ,  ಸಂಘದ ಸದಸ್ಯರಿಗೆ 10 ಶೇಕಡಾ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಪದ್ಮ ಗೌಡ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಸೋಮಂತಡ್ಕದಲ್ಲಿ ಹಾಗೂ ಕಲ್ಲೇರಿಯಲ್ಲಿ ಶಾಖೆಯಲ್ಲಿ  ಒಳ್ಳೆಯ ರೀತಿಯಲ್ಲಿ ವ್ಯವಹಾರ ನಡೆದು ಶಾಖೆ ಲಾಭದಲ್ಲಿ ಇದೆ. ಆರ್ಥಿಕವಾಗಿ ಮುಂದೆ ಬರಬೇಕು ಎಂಬ ದೃಷ್ಟಿಯಿಂದ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭ ಮಾಡಿದ್ದೇವೆ. ವಾಣಿ ಶಿಕ್ಷಣ ಸಂಸ್ಥೆ, ಸ್ಪಂದನಾ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಒಳ್ಳೆಯ ರೀತಿಯಿಂದ ನಡೆಯುತ್ತಿದೆ. ಸಂಘದಲ್ಲಿ ನಾಲ್ಕು ಸಾವಿರ ಸದಸ್ಯರು ಇದ್ದು ಎರಡು ಶಾಖೆಯನ್ನು ತೆರೆಯಲು ಚಿಂತನೆ ಮಾಡಿದ್ದೇವೆ ಎಂದು ಹೇಳಿದರು

ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನಿರ್ದೇಶಕರಾದ ಗೋಪಾಲಕೃಷ್ಣ ಬಿ., ನಾರಾಯಣ ಗೌಡ, ಮಾಧವ ಗೌಡ, ಜಯಾನಂದ ಗೌಡ, ಯಶವಂತ ಬಿ.ಟಿ., ಸುರೇಶ್ ಬಿ., ಸುನೀಲ್ ಎ., ಕೃಷ್ಣಪ್ಪ ಗೌಡ, ಪುರಂದರ ಗೌಡ, ಭವಾನಿ ಕೆ., ಉಷಾದೇವಿ ಬಿ., ಶ್ರೀನಾಥ್ ಕೆ.ಎಮ್., ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್ ಕುಮಾರ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿ,
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್  ಲೆಕ್ಕ ಪತ್ರ ವಾಚಿಸಿದರು. ನಿರ್ದೇಶಕ ಮಾಧವ ಧನ್ಯವಾದವಿತ್ತರು.

Exit mobile version