ಕೊಕ್ಕಡ: ಗ್ರಾಮ ಶಕ್ತಿ ಕೇಂದ್ರ ಕಾರ್ಯಕರ್ತರ ಅಭ್ಯಾಸ ವರ್ಗವು ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪೂವಾಜೆ ಅದ್ಯಕ್ಷತೆಯಲ್ಲಿ ನಡೆಯಿತು
ದೀಪ ಪ್ರಜ್ವಲನೆ ಮೂಲಕ ಬಿಜೆಪಿ ಗ್ರಾಮ ಸಮಿತಿ ಮಾಜಿ ಕಾರ್ಯದರ್ಶಿ ಸುಂದರ ಭಂಡಾರಿ ಚಾಲನೆ ನೀಡಿದರು ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಜನಪ್ರಿಯ ಶಾಸಕರು ಮಾನ್ಯ ಹರೀಶ್ ಪೂಂಜಾರವರು ಉದ್ಘಾಟನ ಭಾಷಣ ಮಾಡಿ ಜನಸಂಘ ಕಾಳಘಟ್ಟದಿಂದ ಈ ವರೆಗೂ ಅನೇಕ ನಿಸ್ವಾರ್ಥ ಹಿರಿಯಕಾರ್ಯಕರ್ತರು ಕೊಕ್ಕಡದಲ್ಲೂ ಪಾರ್ಟಿಯನ್ನು ಕಟ್ಟಿ ಬೆಳೆಸಿದ್ದಾರೆ ನಮ್ಮಂತ ಯುವ ಕಾರ್ಯಕರ್ತರು ಪಾರ್ಟಿಯೊಂದಿಗೆ ನಾನು ಏನು? ಯಾಕೆ ಕೆಲಸ ಮಾಡಬೇಕು ಎಂದು ಅರ್ಥಹಿಸಿಕೊಳ್ಳಲು ಅಭ್ಯಾಸವರ್ಗವನ್ನು ಉಪಯೋಗಿಸಿಕೊಳ್ಳಿ ಅಂದರು.
ಪ್ರಥಮ ಅವಧಿಯನ್ನು ಬೆಳ್ತಂಗಡಿ ವಕೀಲ ಯತೀಶ್ ಪಾನೇಕ್ಕರ್ ತೆಗೆದುಕೊಂಡರೆ ಅಧ್ಯಕ್ಷತೆಯನ್ನು ಕಾರ್ಯಕರ್ತೆ ಲಕ್ಷ್ಮಿ ಅಡೈ ವಹಿಸಿದ್ದರು. 2ನೇ ಅವಧಿಯ ಅಧ್ಯಕ್ಷತೆಯನ್ನು ರಾಮಣ್ಣ ಗೌಡ ಕೇಚೋಡಿ ವಹಿಸಿ ಸೀತಾರಾಮ್ ಬೆಳಾಲು ನಿರ್ವಹಿಸಿದರು. 3ನೇ ಅವಧಿಯ ಅಧ್ಯಕ್ಷತೆಯನ್ನು ಲೋಕಯ್ಯ ಗೌಡ ಕೆಂಪಮುದೆಲ್ ವಹಿಸಿ ಸುಧಾಕರ್ ಲಾಯಿಲ ನಿರ್ವಹಿಸಿದರು.
ಸಮಾರೋಪ ವೇದಿಕೆಯಲ್ಲಿ ತಾಲೂಕು ಅಭ್ಯಾಸವರ್ಗ ಸಂಚಾಲಕ ಕೊರಗಪ್ಪ ಗೌಡ ಚಾರ್ಮಾಡಿ, ಪಂಚಾಯತ್ ಅಧ್ಯಕ್ಷೆ ಬೇಬಿ, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಉಪಸ್ಥಿತಿಯಲ್ಲಿ ಹಿರಿಯ ಮುಖಂಡರು ಕುಶಾಲಪ್ಪ ಗೌಡ ಪೂವಾಜೆ ಸಮಾರೋಪ ಭಾಷಣ ಮಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಕೊಕ್ಕಡ ಬೂತು ಅಧ್ಯಕ್ಷ ಕಾರ್ಯದರ್ಶಿ ಗಳಾದ ಕಿರಣ್ ಬಳ್ತಿಮರ್, ರವಿಚಂದ್ರ ಪುಡಿಕೇತ್ತುರ್, ಶಶಿಕುಮಾರ್ ತಿಪ್ಪಮಾಜಲ್, ಶ್ರೀಧರ್ ಬಲಕ್ಕ, ಲಿಂಗಪ್ಪ ಕಡಿರ, ಭಾಸ್ಕರ್ ಶೆಟ್ಟಿಗಾರ್, ಕಿಶೋರ್ ಪೋಯ್ಯೋಲೆ, ಕೊಕ್ಕಡ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಸಿ.ಎ ಬ್ಯಾಂಕ್ ನಿರ್ದೇಶಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರೂಪಣೆ ಯೋಗೀಶ್ ಆಳಂಬಿಲ ಸ್ವಾಗತಿಸಿದರು. ಪವಿತ್ರ ಕೆ. ಬಿಜೆಪಿ ಗೀತೆಯನ್ನು, ಪ್ರಮೀಳಾ ಜಿ. ನಿರ್ವಹಿಸಿದರು. ಕಾರ್ಯಕರ್ತರು ಸಹಕಾರವಿತ್ತರು.