Site icon Suddi Belthangady

ಬುರುಡೆ ಪ್ರಕರಣ-ತಡರಾತ್ರಿವರೆಗೂ ವಿಠಲ ಗೌಡನ ವಿಚಾರಣೆ-ಬುರುಡೆ ರಹಸ್ಯ ಬಯಲಿಗೆಳೆಯುತ್ತಿರುವ ಎಸ್.ಐ.ಟಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಆರೋಪಿ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನ ಆದ ನಂತರ ಎಸ್.ಐ.ಟಿ ಅಧಿಕಾರಿಗಳು ಸೌಜನ್ಯ ಮಾವ ವಿಠಲ ಗೌಡರ ವಿಚಾರಣೆ ತೀವ್ರಗೊಳಿಸಿದೆ.

ಸೆ.6ರಂದು ಸಾಯಂಕಾಲ ನೇತ್ರಾವತಿಯ ಬಂಗ್ಲೆಗುಡ್ಡೆ ಸಮೀಪ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ನಂತರ ತಡರಾತ್ರಿವರೆಗೂ ವಿವಿಧ ಮಾಹಿತಿ ಪಡೆದುಕೊಂಡಿದೆ.

ತೀವ್ರ ವಿಚಾರಣೆ ನಡೆಸಿ ಬುರುಡೆ ರಹಸ್ಯವನ್ನು ತಿಳಿಯಲು ಸ SIT ಪ್ರಯತ್ನಿಸಿದೆ. ಬುರುಡೆ ತಂದು ಕೊಟ್ಟಿದ್ಯಾರು, ಇದರ ಹಿಂದೆ ಯಾರ್ಯಾರು ಇದ್ದಾರೆ, ಎಲ್ಲಿಂದ ತರಲಾಗಿದೆ, ಇದರಲ್ಲಿ ವಿಠಲ ಗೌಡರ ಪಾತ್ರವಿದೆಯಾ ಎಂಬೆಲ್ಲ ಪ್ರಶ್ನೆಗಳನ್ನು ಕೇಳಲಾಗಿದೆ.
ಅಲ್ಲದೇ ಸೆ.6ರ ತಡರಾತ್ರಿವರೆಗೂ ವಿಠಲ ಗೌಡರ ವಿಚಾರಣೆ ನಡೆಸಲಾಗಿದ್ದು, ಸೆ.7ರಂದು ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಿದ್ದಾರೆ.

Exit mobile version