Site icon Suddi Belthangady

ಬೆಳ್ತಂಗಡಿ: ಲಯನ್ಸ್ ಕ್ಲಬ್ ನಲ್ಲಿ ಶಿಕ್ಷಕರ ದಿನಾಚರಣೆ

ಬೆಳ್ತಂಗಡಿ: ಲಯನ್ಸ್ ಕ್ಲಬ್ ನಿಂದ ಶಿಕ್ಷಕರ ದಿನಾಚರಣೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನದಲ್ಲಿ ನಡೆಸಲಾಯಿತು. 2025ರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಜಯ ಸುರ್ಯ ಶಾಲೆ, ಆರತಿ ನಿಟ್ಟಡೆ ಶಾಲೆ, ವಿಜಯಕುಮಾರ್ ಪೆರ್ಲ ಬೈಪಾಡಿ ಶಾಲೆ ಅವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ ಮುರಳಿ ಬಲಿಪ ಎಮ್.ಜೆ.ಎಫ್. ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕುಮಾರ್ ಹೆಗ್ಡೆ ಅವರು ಭಾಗವಹಿಸಿ ಶಿಕ್ಷಕ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕ ಬಂಧುಗಳನ್ನು ಹಾಗೂ ಲಯನ್ಸ್ ಸದಸ್ಯ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು.

ಲಯನ್ಸ್ ಕಟ್ಟಡ ಸಮಿತಿಯ ಅಧ್ಯಕ್ಷ ಲಯನ್ ಎಂ. ಜಿ. ಶೆಟ್ಟಿಎಮ್.ಜೆ.ಎಫ್., ನಿಕಟಪೂರ್ವ ಅಧ್ಯಕ್ಷ ಲಯನ್ ದೇವದಾಸ್ ಶೆಟ್ಟಿ ಪಿ.ಎಮ್.ಜೆ.ಎಫ್., d3 ಲಿಯೋ ಅಧ್ಯಕ್ಷ ಲಿಯೋ ಡಾ. ಬಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೂರ್ವ ಪ್ರಾಂತ್ಯ ಅಧ್ಯಕ್ಷ ಲಯನ್ ಧರಣೇಂದ್ರ ಕೆ. ಜೈನ್ ಅತಿಥಿಗಳ ಪರಿಚಯವನ್ನು ಮಾಡಿದರು. ಪೂರ್ವ ಪ್ರಾಂತ್ಯ ಅಧ್ಯಕ್ಷ ಲಯನ್ ವಸಂತ ಶೆಟ್ಟಿ ಶ್ರದ್ದಾ ಎಮ್.ಜೆ.ಎಫ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಪೂರ್ವ ಪ್ರಾಂತ್ಯ ಅಧ್ಯಕ್ಷರು, ವಲಯ ಅಧ್ಯಕ್ಷರು, ಪೂರ್ವಾಧ್ಯಕ್ಷರು ಹಾಗೂ ಲಯನ್ಸ್ ಮತ್ತು ಲಿಯೋ ಸದಸ್ಯರು ಭಾಗವಹಿಸಿದರು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಲಯನ್ ಅಮಿತಾನಂದ ಹೆಗ್ಡೆ ಎಮ್.ಜೆ.ಎಫ್. ಧನ್ಯವಾದ ನೀಡಿದರು.

Exit mobile version