Site icon Suddi Belthangady

ಮಾಚಾರು: ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

ಉಜಿರೆ: ಮುಹ್ಯದ್ದೀನ್ ಜುಮಾ ಮಸ್ಜಿದ್ ಮತ್ತು ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಮಾಚಾರ್ ವತಿಯಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮದಿನಾಚರಣೆ ವಿಜೃಂಭಣೆಯಿಂದ ನಡೆಸಲಾಯಿತು. ಜಮಾಅತ್ ಅಧ್ಯಕ್ಷ ಬಿ. ಎಮ್. ಇಲ್ಯಾಸ್ ಧ್ವಜಾರೋಹಣ ನೆರವೇರಿಸಿದರು. ರಾತ್ರಿ ಸಿರಾಜುಲ್ ಹುದಾ ಮದರಸ ವಿಧ್ಯಾರ್ಥಿಗಳ ಇಷ್ಕೇ ಮದೀನ – 2025 ಪ್ರವಾದಿ ಪ್ರಕೀರ್ತನೆಗಳು ಹಾಗೂ ಆಕರ್ಷಕ ಬುರ್ದಾ ಮತ್ತು ಕವಾಲಿ ಮಜ್ಲಿಸ್ ನಡೆಯಿತು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಸದರ್ ಮುಅಲ್ಲಿಮರಾದ ಹೈದರ್ ಹಿಷಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖತೀಬುಸ್ತಾದ ಸಲೀಮ್ ಸಖಾಫಿ ಭದ್ರಾವತಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಿದರು. ಗೌರವಧ್ಯಕ್ಷ ಹಂಝ ಬಿ.ಎ., ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಅಕ್ಬರ್ ಅಲಿ ಬದ್ರಿಯ, ಉಪಾಧ್ಯಕ್ಷ ಸಲೀಮ್ ಅಂಗಡಿ, ಕಾರ್ಯದರ್ಶಿ ಹೈದರ್ ಸುಪಾರಿ, ಹಸೈನಾರ್ HKGN, ಕಾಸಿಮ್ ಮುಸ್ಲಿಯಾರ್, ಹಕೀಮ್ ಕುದುರು, ಸಲಾಮ್ ಅಂಗಡಿ, ಅನ್ಸಾರ್ ಬೆದ್ರಳಿಕೆ, SSF ಅಧ್ಯಕ್ಷ ಬಶೀರ್ ಕುದುರು, ಬೆಳಾಲು ಅಧ್ಯಕ್ಷ ಆದಮ್ ಟಿ.ಎಚ್., ಪಳ್ಳಿದಡ್ಕ ಅಧ್ಯಕ್ಷ ಹಕೀಮ್ ಮದನಿ ಉಪಸ್ಥಿತರಿದ್ದರು. ಮಾಚಾರು, ಬೆಳಾಲು, ಪಳ್ಳಿತಡ್ಕ ಜಮಾಅತರೆಲ್ಲರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕೊನೆಯಲ್ಲಿ ಸಾಮೂಹಿಕ ಅನ್ನದಾನ ನಡೆಯಿತು. SYS ಪ್ರಧಾನ ಕಾರ್ಯದರ್ಶಿ ಅನ್ಸಾರ್ ಸ‌ಅದಿ ವಂದಿಸಿದರು.

Exit mobile version