ಉಜಿರೆ: ಪ್ರಗತಿ ಮಹಿಳಾ ಮಂಡಲದ ಕಟ್ಟಡದ ಸಭಾಂಗಣದಲ್ಲಿ ಸುನಾದ ಸಂಗೀತ ಕಲಾಶಾಲೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಗಳು ಸೆ.5ರಂದು ಶುಭಾರಂಭಗೊಂಡಿತು.
ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಅವರು ದೀಪ ಪ್ರಜ್ವರನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಗಾಯತ್ರಿ ಶ್ರೀಧರ್, ಶಿಕ್ಷಕ ಕೃಷ್ಣಕುಮಾರ್ , ಸುಬ್ರಹ್ಮಣ್ಯ ಪ್ರಸಾದ್ ಕಾಂಚನ ಉಪಸ್ಥಿತರಿದ್ದರು.
ಉದ್ಘಾಟನೆಯ ನಂತರ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಗಳು ನಡೆದವು.
ಸಂಗೀತ ಗುರುಗಳಾದ ಶ್ರೀರಾಮ ಕಾಂಚನ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.