Site icon Suddi Belthangady

ರಾಷ್ಟ್ರ ಪ್ರಶಸ್ತಿ ವಿಜೇತ ಕುತ್ಲೂರು ಗ್ರಾಮದಲ್ಲಿ ʼಮಂಗಳಾಪುರಂʼ ಚಿತ್ರೀಕರಣ  

ಬೆಳ್ತಂಗಡಿ: ಕಳೆದ ಸೆಪ್ಟೆಂಬರ್ ನಲ್ಲಿ ಅತ್ಯುತ್ತಮ ಸಾಹಸಿಕ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕುತ್ಲೂರು ಗ್ರಾಮ ಈಗ  ಚಲನಚಿತ್ರ ಚಿತ್ರೀಕರಣ ಸ್ಪಾಟ್ ಆಗಿ ಗುರಿತಿಸಿದ್ದು ಸತತ 4ನೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.  ತುಳು ಚಿತ್ರಗಳಾದ  ದಸ್ಕತ್ , ಸು ಫ್ರಮ್ ಸೋ , ಕಾ೦ತಾರ ಭಾಗ 1 ರ ಅನಿಮೇಶನ್‌ ಹಾಗೂ ಡ್ರೋನ್ ದೃಶ್ಯಗಳ ಚಿತ್ರೀಕರಣ ಇಲ್ಲಿಯೇ ಆಗಿತ್ತು. ಇದೀಗ ‘ಮಂಗಳಾಪುರಂ’ ಎಂಬ ಕನ್ನಡ ಚಿತ್ರದ‌ ಚಿತ್ರೀಕರಣ ಕೂಡ ಕುತ್ಲೂರು ಭಾಗದಲ್ಲಿ ಭರ‌ದಿಂದ ಸಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮವು ರುದ್ರ ರಮಣೀಯ ಪ್ರಾಕೃತಿಕ ಸೌ೦ದರ್ಯ ಹೊಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಗಳ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಸು ಫ್ರಮ್ ಸೋ ಚಿತ್ರದ ಪ್ರಮುಖ ಅಂಗಡಿ ದೃಶ್ಯ ಕುತ್ಲೂರಿನ ಕುಕ್ಕುಜೆಯಲ್ಲಿ ನಡೆದಿದ್ದು  ಇನ್ನು ಮುಂದೆ ಮಂಗಳಾಪುರಂ ಸಿನಿಮಾದ ಚಿತ್ರೀಕರಣ ಕುತ್ಲೂರು ಸುತ್ತಮುತ್ತದ ಪ್ರದೇಶಗಳಲ್ಲಿ ನಡೆಯಲಿವೆ. 

Exit mobile version