ಬೆಳ್ತಂಗಡಿ: ವಿಶೇಷವಾದ ಭೌಗೋಳಿಕ ಹಿನ್ನೆಲೆಯುಳ್ಳ ತುಳುನಾಡಿನ ಜೀವನ ಪದ್ಧತಿ, ಆಚರಣೆಗಳು ಬಲು ವಿಶಿಷ್ಟವಾಗಿದ್ದು ವಿಶ್ವ ಮಾನ್ಯತೆಯನ್ನು ಪಡೆದಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಕೋಳ್ತಿಗೆ ನಾರಾಯಣ ಗೌಡ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ಪರಂಪರ ವೇದಿಕೆಯ ಆಶ್ರಯದಲ್ಲಿ ನಡೆದ ತುಳು ಸಂಸ್ಕೃತಿಯ ಅನಾವರಣ ‘ಐಸಿರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಯುವಜನರು ಹೊಸತ್ತನ್ನು ಪಡೆದುಕೊಳ್ಳುವ ಭರದಲ್ಲಿ ಹಳೆಯ ಸಂಸ್ಕೃತಿಯನ್ನು ಮರೆಯದೆ ಜೀವನದಲ್ಲಿ ಅಳವಡಿಸಿ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ರೂಪಿಸುವಂತವರಾಗಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಪರಂಪರ ವೇದಿಕೆಯ ಸಂಯೋಜಕಿ ಕಿಶೋರಿ ಎಸ್. ರಾವ್, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರವಂತ್, ಅಭಿಜ್ಞಾ ಉಪಸಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಸ್ವಾಗತಿಸಿದರು. ಆರುಫಾ ಸುಹಾನ ಕಾರ್ಯಕ್ರಮ ನಿರೂಪಿಸಿದರು. ಪರಂಪರ ವೇದಿಕೆಯ ಸಂಯೋಜಕ ರವಿಶಂಕರ್ ಧನ್ಯವಾದವಿತ್ತರು.