Site icon Suddi Belthangady

ಉಜಿರೆ: ಬೈಕ್ – ಟ್ಯಾಂಕರ್ ನಡುವೆ ಅಪಘಾತ ಪ್ರಕರಣ: ಗಾಯಾಳು ಮೃತ್ಯು

ಉಜಿರೆ: ಬೈಕ್ – ಟ್ಯಾಂಕರ್ ನಡುವೆ ಅಪಘಾತ ಪ್ರಕರಣ: ಗಾಯಾಳು ಮೃತ್ಯುಉಜಿರೆ: ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ವಿರುದ್ಧ ದಿಕ್ಕಿನಿಂದ ಅಡುಗೆ ಅನಿಲ ತೆಗೆದುಕೊಂಡು ತೆರಳುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಸೆ.3ರಂದು ಸಂಜೆ ಉಜಿರೆಯ ಹಳ್ಳಿಮನೆ ಸಮೀಪ ನಡೆದಿತ್ತು.

ಘಟನೆಯಲ್ಲಿ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಸವಾರ ಕಡಿರುದ್ಯಾವರ ನಿವಾಸಿ ಪುರುಷೋತ್ತಮರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೆ. 4ರಂದು ನಿಧನರಾದರು.

ಮೃತರು ಗಾರೆ ಕಾರ್ಮಿಕರಾಗಿದ್ದರು. ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Exit mobile version