Site icon Suddi Belthangady

ವಾಣಿ ಪಿಯು ಕಾಲೇಜು ವಾಣಿಜ್ಯ ಸಂಘದಿಂದ ‘ಲೀಡರ್ಸ್ ಟಾಕ್’ ಕಾರ್ಯಕ್ರಮ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ “ಲೀಡರ್ಸ್ ಟಾಕ್” ಕಾರ್ಯಕ್ರಮದ ಅಂಗವಾಗಿ ಕಂಪನಿ ಸೆಕ್ರೆಟರಿ ಕೋರ್ಸ್‌ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಉಡುಪಿ ಮೂಲದ ಪ್ರಾಕ್ಟಿಸಿಂಗ್ ಕಂಪನಿ ಸೆಕ್ರೆಟರಿ ಸಂತೋಷ್ ಪ್ರಭು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಿ.ಎಸ್. ಕೋರ್ಸ್ ಮಾಡಿದರೆ ದೊರೆಯುವ ಉದ್ಯೋಗಾವಕಾಶಗಳು, ಕೋರ್ಸ್‌ನ ಅಗತ್ಯತೆ ಹಾಗೂ ಅದನ್ನು ಹೇಗೆ ಅಭ್ಯಾಸಿಸಬೇಕು ಎಂಬ ಕುರಿತು ವಿವರವಾದ ಮಾಹಿತಿಯನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ ವಾಣಿ ಪಿಯು ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಮಂಗಳೂರು ಚಾಪ್ಟರ್‌ನ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಶಂಕರ್ ಬಿ. ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಓರಿಯಂಟೇಶನ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಶಂಕರ್ ರಾವ್ ನೆರವೇರಿಸಿದರು.

Exit mobile version