Site icon Suddi Belthangady

ಕಾಶಿಯ ಗಂಗಾ ಆರತಿ ಶೈಲಿಯಲ್ಲಿ ಶ್ರೀ ವಿದ್ಯಾ ಗಣಪತಿಗೆ ಮಹಾ ಆರತಿ

ಬೆಳ್ತಂಗಡಿ: ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಸುಭಾಷ್ ನಗರ, ಬಣಕಲ್ ಇದರ 25ನೇ ವರ್ಷದ ಸಾರ್ವಜನಿಕ ಶ್ರೀ ವಿದ್ಯಾಗಣಪತಿ ಮಹೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಕಾಶಿಯ ಗಂಗಾ ಆರತಿಯಿಂದ ಪ್ರೇರಣೆ ಪಡೆದು ಇದೇ ಮೊದಲ ಬಾರಿಗೆ ಶ್ರೀ ವಿದ್ಯಾಗಣಪತಿ ದೇವರಿಗೆ ಮಹಾ ಆರತಿ ನಡೆಯಿತು. ನವೀನ್ ಧರ್ಮಸ್ಥಳ ಇವರ ಮಾರ್ಗದರ್ಶದಲ್ಲಿ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡದ ನೃತ್ಯಗಾರರು ಮಹಾ ಆರತಿ ನೆರವೇರಿಸಿದರು. ನೆರೆದಿರುವ ಭಕ್ತರ ಕಣ್ಮನ ಸೆಳೆಯುವಲ್ಲಿ ಮಹಾ ಆರತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Exit mobile version