Site icon Suddi Belthangady

ತಲೆ ಬುರುಡೆ ಪ್ರಕರಣದಲ್ಲಿ ಉದಯ್ ಜೈನ್ ವಿಚಾರಣೆ-ಚಿನ್ನಯ್ಯ ಹೆಸರು ಹೇಳಿದ್ದರಿಂದ ಎಸ್.ಐ.ಟಿಯಿಂದ ವಿಚಾರಣೆ

ಬೆಳ್ತಂಗಡಿ: ಸೆ.3ರಂದು ಧರ್ಮಸ್ಥಳ ಆಟೋ ಚಾಲಕ ಉದಯ್ ಜೈನ್ ಎಸ್. ಐ. ಟಿ ವಿಚಾರಣೆಗೆ ಆಗಮಿಸಿ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ವಾಪಾಸಾಗಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿಯವರು ಕೊಟ್ಟ ದೂರಿನ ಹಿನ್ನಲೆಯಲ್ಲಿ ಉದಯ್ ಜೈನ್ ವಿಚಾರಣೆ ನಡೆಸಿದ್ದಾರೆಂದು ಅಂದಾಜಿಸಲಾಗಿತ್ತು, ಆದರೆ ಎಸ್.ಐ.ಟಿ ಅಧಿಕಾರಿಗಳು ಬುರುಡೆ ಕೇಸ್ ಸಂಬಂಧ ಉದಯ್ ಜೈನ್ ರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಆರೋಪಿ ಚಿನ್ನಯ್ಯ ಉದಯ್ ಜೈನ್ ಹೆಸರು ಹೇಳಿದ್ದರಿಂದ ಆತನ‌ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಎದುರಿಸಿರುವ ಉದಯ್ ಜೈನ್, ಮುಂದೆ ಯಾವಾಗ ಕರೆದರೂ ಬರುವುದಾಗಿ ತಿಳಿಸಿ ಹೋಗಿದ್ದಾರೆ.

Exit mobile version