Site icon Suddi Belthangady

ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ವಿಶೇಷ ಕಾರ್ಯಕ್ರಮ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘದಿಂದ ಯುವ ಜನತೆ ಮತ್ತು ಕೃತಕ ಬುದ್ಧಿಮತ್ತೆ ವಿಶೇಷ ಕಾರ್ಯಕ್ರಮ ಸೆ.3ರಂದು ಜರುಗಿತು. ಎ.ಜೆ. ಸಮೂಹ ಸಂಸ್ಥೆಯ ಅತಿಥಿ ಉಪನ್ಯಾಸಕ ಶರಲ್ ಜೇನ್‌ ನೊರೊನ್ಹಾ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಜೊತೆಗೆ ಬದುಕುತ್ತಿರುವಾಗ ಇದರಿಂದ ಆಗುವ ಸಾಧಕ ಬಾಧಕಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ವಿನ್ಸೆಂಟ್ ರೊಡ್ರಿಗಸ್ ವಹಿಸಿದ್ದರು. ಮಹಿಳಾ ಸಂಘದ ನಿರ್ದೇಶಕಿ ಲವೀನಾ ಜಾನೆಟ್ ಪಿಂಟೋ ಸ್ವಾಗತಿಸಿ, ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವಂದಿಸಿದರು.

Exit mobile version