ಬೆಳ್ತಂಗಡಿ: ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಥಮ ವರ್ಷದ ಬಿಎ, ಬಿಕಾಂ, ಬಿಸಿಎ ತರಗತಿಗಳಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನೆರವೇರಿತು.
ಬೆಳ್ತಂಗಡಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷೆ ಪ್ರೀತಿತ ಧರ್ಮವಿಜೇತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಶುಭ ಹಾರೈಸಿದರು.
ಕಾಲೇಜಿಗೆ ನೂತನವಾಗಿ ಸೇರ್ಪಡೆಕೊಂಡ ಉಪನ್ಯಾಸಕರನ್ನು ಅಧ್ಯಕ್ಷೆ ಪ್ರೀತಿತ ಧರ್ಮವಿಜೇತ್ ಸ್ವಾಗತಿಸಿದರು. ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿ ಸಂಘದ ನಾಯಕನಾಗಿ ದೀಕ್ಷಿತ್ ತೃತೀಯ ಬಿ.ಎ., ಉಪ ನಾಯಕನಾಗಿ ಆಶಿಕ್ ದ್ವಿತೀಯ ಬಿ.ಕಾಂ., ಕಾರ್ಯದರ್ಶಿಯಾಗಿ ಧನ್ಯ ತೃತೀಯ ಬಿ.ಕಾಂ., ಜೊತೆ ಕಾರ್ಯದರ್ಶಿಯಾಗಿ ಆಯಿಷ ದ್ವಿತೀಯ ಬಿ.ಎ., ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ಅಸ್ಬಾಕ್ ತೃತೀಯ ಬಿ.ಕಾಂ., ಜೊತೆ ಕಾರ್ಯದರ್ಶಿಯಾಗಿ ದೀಪ್ತಿ ತೃತೀಯ ಬಿ.ಕಾಂ., ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಚಂದನ ತೃತೀಯ ಬಿ.ಎ., ಜೊತೆ ಕಾರ್ಯದರ್ಶಿಯಾಗಿ ಮೊಯ್ಯಿದಿ ತೃತಿಯ ಬಿ.ಕಾಂ., ಲಲಿತ ಕಲಾ ಸಂಗದ ನಾಯಕಿಯಾಗಿ ಮಾಷಿತ ತೃತೀಯ ಬಿ.ಕಾಂ., ಮಿಥುನ್ ತೃತೀಯ ಬಿ.ಎ., ತಾಂತ್ರಿಕ ಸಹಾಯಕರಾಗಿ ಅಭಿಷೇಕ್ ತೃತೀಯ ಬಿ.ಎ., ಭುವನ್ ಕೃತಿಯ ಬಿ.ಕಾಂ., ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯಲ್ಲಿ ಭುವನ ತೃತೀಯ ಬಿ.ಕಾಂ., ಸ್ವೀಡನ್ ತೃತೀಯ ಬಿಎ ಆಯ್ಕೆಯಾಗಿದ್ದು ಅವರಿಗೆ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕೇಶ್ ಕುಮಾರ್ ಪ್ರಮಾಣವಚನ ಬೋಧಿಸಿದರು.
ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎ. ಶಮಿವುಲ್ಲಾ ಸ್ವಾಗತಿಸಿ, ಆಂಗ್ಲ ಭಾಷ ಉಪನ್ಯಾಸಕ ಸಮ್ಯಕ್ತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸೌಮ್ಯ ವಂದಿಸಿದರು.