ಮಚ್ಚಿನ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಪುಂಜಾಲಕಟ್ಟೆ ಮತ್ತು ಗುರುವಾಯನಕೆರೆ ವಲಯ ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟವು ಮಚ್ಚಿನ ಶಾಲಾ ಕ್ರೀಡಾಂಗಣದಲ್ಲಿದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ದೀಪ ಬೆಳಗಿಸಿ ಉದ್ಘಾಟಿಸಿ, ಮಕ್ಕಳ ಕ್ರೀಡೆಗೆ ಶಿಕ್ಷಕರೊಂದಿಗೆ ಮನೆಯಲ್ಲಿ ಪೋಷಕರ ತರಬೇತಿ ಇದ್ದಲ್ಲಿ ಮಕ್ಕಳು ಇನ್ನಷ್ಟು ಯಶಸ್ವಿ ಸಾಧಿಸಲು ಸಾಧ್ಯ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಪೂಜಾರಿ, ಬೆಳ್ತಂಗಡಿ ರಾಜ್ಯಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪುಂಜಾಲಕಟ್ಟೆ, ಗುರುವಾಯನಕೆರೆ ಕ್ಲಸ್ಟರ್ ನೋಡಲ್ ಅಧಿಕಾರಿ ಜಯರಾಜ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಗೌಡ, ಮಚ್ಚಿನ ಪ್ರೌಢಶಾಲಾ ದೈಹಿಕ ಶಿಕ್ಷಕ ಸುಭಾಷ್, ಮಚ್ಚಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್, ಸಿ.ಆರ್.ಪಿ ಚೇತನ, ನಿವೃತ್ತ ಶಿಕ್ಷಕ ರಘುಪತಿ ಭಟ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ದಿನೇಶ್ ಎಂ., ಹರೀಶ್, ಅಶ್ರಫ್, ಕಿರಣ್ ಭಟ್, ವಿದ್ಯಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಹಾಗೂ ಅಂತರಾಷ್ಟ್ರೀಯ ಮಟ್ಟದ ತ್ರೋಬಲ್ ಪಂದ್ಯಾಟದಲ್ಲಿ ಸ್ಪರ್ಧಿಸಿದ ದೀಪಿಕಾ ಶೆಟ್ಟಿ ಮತ್ತು ರಾಜ್ಯ ಮಟ್ಟದ ಕಬ್ಬಡಿ ಆಟದಲ್ಲಿ ಸ್ಪರ್ಧಿಸಿದ ಶ್ರಾವ್ಯ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟದಲ್ಲಿ ಹುಡುಗರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಮಚ್ಚಿನ ಶಾಲೆ, ದ್ವಿತೀಯ ಗುರುವಾಯನಕೆರೆ ಶಾಲೆ, ಹುಡುಗಿಯರ ವಿಭಾಗದಲ್ಲಿ ಪ್ರಥಮ ಕುವೆಟ್ಟು ಶಾಲೆ, ದ್ವಿತೀಯ ಮಚ್ಚಿನ ಶಾಲೆ. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಸುನೀತ ಬಿ. ಸ್ವಾಗತಿಸಿದರು. ದಿವ್ಯ ಹೆಚ್.ಎ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ ವೀಣಾ ಧನ್ಯವಾದ ನೀಡಿದರು.
✍️ವರದಿ ಹರ್ಷ ಬಳ್ಳಮಂಜ