Site icon Suddi Belthangady

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಆರೋಪ-ಗಿರೀಶ್ ಮಟ್ಟಣನವರ್, ತಿಮರೋಡಿ ವಿರುದ್ಧ ಕೇಸ್ ದಾಖಲು

ಬೆಳ್ತಂಗಡಿ- ಹಲವಾರು ದಿನಗಳಿಂದ ಬೇರೆ ಬೇರೆ ವ್ಯಕ್ತಿಗಳನ್ನು, ಬ್ಲಾಗರ್ ಗಳನ್ನು ಕರೆದುಕೊಂಡು ಬಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರವೀಣ್ ಕೆ. ಆ.ರ್ ಧರ್ಮಸ್ಥಳ ಎಂಬವರು ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಈ ಬಗ್ಗೆ ಎಸ್. ಪಿ. ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅದರ ಪ್ರಕಾರ “ದಿನಾಂಕ 30.08.2025 ರಂದು ಪ್ರಕರಣದ ಪಿರ್ಯಾದುದಾರರಾದ ಪ್ರವೀಣ ಕೆ. ಆರ್. ಧರ್ಮಸ್ಥಳ ಎಂಬವರು ಬೆಳ್ತಂಗಡಿಗೆ ಬಂದಿರುವ ಸಮಯ ಸಂಜೆ ಸುಮಾರು 4.30 ಗಂಟೆಗೆ ತನ್ನ ಮೊಬೈಲ್ ನಲ್ಲಿ ಯೂ ಟ್ಯೂಬ್ ವೀಕ್ಷಿಸುತ್ತಿರುವ ಸಮಯ, ಗಿರೀಶ್ ಮಟ್ಟಣ್ಣನವರ್ ರವರು ಮದನ್ ಬುಗುಡಿ ರವರ ಜೊತೆ ನಿಂತುಕೊಂಡು ಮಾಧ್ಯಮದ ಮುಂದೆ ಮಾತನಾಡುತ್ತಾ, ಸಮಾಜದ ಶಾಂತಿ ಸೌಹಾರ್ದತೆಯನ್ನು ನಾಶಪಡಿಸುವ ಉದ್ದೇಶದಿಂದ, ಮತ್ತು ಧಾರ್ಮಿಕ ಭಾವನೆಯನ್ನು ಕೆಡಿಸುವ ಉದ್ದೇಶದಿಂದ ಆರೋಪಿತ ಗಿರೀಶ್ ಮಟ್ಟಣ್ಣನವರ್ ಮತ್ತು ಆರೋಪಿತ ಮಹೇಶ್ ಶೆಟ್ಟಿ ತಿಮರೋಡಿಯವರು ಸೇರಿಕೊಂಡು ಹಲವಾರು ದಿನಗಳಿಂದ ಬೇರೆ ಬೇರೆ ವ್ಯಕ್ತಿಗಳನ್ನು ಬ್ಲಾಗರ್ ಗಳನ್ನು ಕರೆದುಕೊಂಡು ಬಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 100/2025 ಕಲಂ: 204, 319(2)353(2) ಜೊತೆಗೆ 3(5) BNS ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಲಾಗಿದೆ.

Exit mobile version