Site icon Suddi Belthangady

ಕರಿಮಣೇಲು: ಚರಂಡಿ ನೀರಿಗೆ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಕರಿಮಣೇಲು ಗ್ರಾಮದ ಖಂಡಿಗ ಎಂಬಲ್ಲಿ ಚರಂಡಿ ನೀರಿನಲ್ಲಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಕರಿಮಣೇಲು ಗ್ರಾಮದ ಕಲ್ಲಮೆಬೆಟ್ಟು ನಿವಾಸಿ ಭಾಸ್ಕರ ಹೆಗ್ಡೆ (50) ಮೃತಪಟ್ಟವರು. ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದ ಅವರು ಆ. 27ರಂದು ಗಣೇಶ ಹಬ್ಬದ ನಿಮಿತ್ತ ಸಂಜೆ ಸುಮಾರು 4.30 ಗಂಟೆಗೆ ಮನೆಯಿಂದ ಸಂಬಂಧಿ ಪ್ರಶಾಂತ್ ಶೆಟ್ಟಿಯವರೊಂದಿಗೆ ವೇಣೂರು ಕಡೆ ಹೋದವರು ಸಂಜೆಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಆ.30ರಂದು ಪರಿಚಿತರಾದ ಸದಾನಂದ ಎಂಬವರಿಗೆ ಚರಂಡಿಯಲ್ಲಿ ಬಿದ್ದ ಭಾಸ್ಕ‌ರ್ ಅವರನ್ನು ಕಂಡು ಮನೆಮಂದಿಗೆ ತಿಳಿಸಿದ್ದಾರೆ.
ಮೃತ ಭಾಸ್ಕರ್ ಅವರು ಅಮಲು ಪದಾರ್ಥ ಸೇವಿಸಿ ನಡೆದುಕೊಂಡು ಹೋಗುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಂತೆ ಕಂಡು ಬಂದಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version