Site icon Suddi Belthangady

ಬೆಳಾಲು: ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಉದ್ಘಾಟನೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಆ. 31ರಂದು “ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಬೆಳಾಲು” ಇದರ ಉದ್ಘಾಟನೆ ನಡೆಯಿತು. ಉದ್ಘಾಟನೆಯ ಪ್ರಯುಕ್ತ ಪ್ರಪ್ರಥಮ ಹೆಜ್ಜೆಯಾಗಿ ಬೆಳಾಲು ಗ್ರಾಮಸ್ಥರಿಗೆ, ಮಕ್ಕಳಿಗೆ ವಯೋಮಾನಕ್ಕೆ ಅನುಗುಣವಾಗಿ ಹತ್ತು ವಿಭಾಗಗಳಲ್ಲಿ “ಗುಡ್ಡಗಾಡು ಓಟದ ಸ್ಪರ್ಧೆ-2025” ಸಂಪನ್ನಗೊಂಡಿತು.

ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ನಾಮ ಫಲಕದ ಅನಾವರಣದ ಮೂಲಕ ನೆರವೇರಿಸಿ ಶುಭ ಹಾರೈಸಿದರು. ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಕ್ಲಬ್ ನ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹದ ಭರವಸೆ ನೀಡಿದರು. ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾದ ನಿಶಾ ಯಶವಂತ ಬನಂದೂರು ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ಸ್ಪರ್ಧಾಳುಗಳಿಗೆ ವಾರ್ಮಪ್ ಗಾಗಿ ಜುಂಬೋ ಡಾನ್ಸ್ ನಡೆಯಿತು. ನಂತರ ನಡೆದ ಗುಡ್ಡ ಗಾಡು ಓಟಕ್ಕೆ ನೋಟರಿ ವಕೀಲ ಶ್ರೀನಿವಾಸ ಗೌಡ, ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕೋಟ್ಯಾನ್ ಚಾಲನೆ ನೀಡಿದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಾನಿಗಳು ಸಹಕಾರ ನೀಡಿದರು. ಮಾಧವ ಗೌಡ ನಿರೂಪಿಸಿ, ಕ್ಲಬ್ ನ ಉಪಾಧ್ಯಕ್ಷ ಸುಲೈಮಾನ್ ಭೀಮಂಡೆ ವಂದಿಸಿದರು.

Exit mobile version