Site icon Suddi Belthangady

ಅನುಗ್ರಹ ಶಾಲೆಯಲ್ಲಿ ಕಲರ್ಸ್ ಡೇ -2025-26

ಉಜಿರೆ: ಅನುಗ್ರಹ ಶಾಲೆಯಲ್ಲಿ ಶ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿಯ ಪುಟಾಣಿಗಳಿಗೆ ‘ಕಲರ್ಸ್ ಡೇ( ಬಣ್ಣಗಳ ದಿನ) ಯನ್ನು ವಿನೂತನ ರೀತಿಯಲ್ಲಿ ವೈಭವದಿಂದ ಆಚರಿಸಲಾಯಿತು. ಶಾಲೆಯ ಹೆಮ್ಮಯ ಬ್ಯಾಂಡ್ ವಾದನದೊಂದಿಗೆ ಪುಟಾಣಿಗಳನ್ನು ಅವರ ಹೆತ್ತವರೊಂದಿಗೆ ಅನುಗ್ರಹ ಶಾಲಾ ಮಹಾದ್ವಾರದಿಂದ ಸಭಾಭವನಕ್ಕೆ ಶಿಸ್ತಿನಿಂದ ಕರೆತರಲಾಯಿತು.

ತದನಂತರ ಪುಟಾಣಿ ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಸಭಾಕಾರ್ಯವನ್ನು ಪ್ರಾರಂಭಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಮರೀನಾ ಬ್ಯಾಪ್ಟಿಸ್ಟ್ ಅವರು ತಮ್ಮ ಭಾಷಣದಲ್ಲಿ ಬಣ್ಣಗಳ ಮಹತ್ವವನ್ನು ತಿಳಿಸಿ, ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಎಂದು ತಿಳಿಸಿದರು. ನಂತರ ಶಾಲಾ ಸಂಚಾಲಕ ಫಾ! ಅಬೆಲ್ ಲೋಬೊ ಅವರು ಕಲರ್ಸ್ ಡೇ ಯ ಮಹತ್ವವನ್ನು ತಿಳಿಸುತ್ತಾ ಮಕ್ಕಳ ಪ್ರಯತ್ನ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲೆಯ ಪ್ರಾಂಶುಪಾಲ ಫಾ! ವಿಜಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫರ್ನಾಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ್ ಶಬರಾಯ ಹಾಗೂ ಶಿಕ್ಷಕಿ ಗ್ರೇಸಿ ಸಲ್ದಾನ್ಹಾ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಹುಲ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ತದನಂತರ ಪುಟಾಣಿ ಮಕ್ಕಳಿಂದ ನಡೆದ ವೈವಿಧ್ಯಮಯ ಬಣ್ಣಗಳ ವಸ್ತ್ರಾಲಂಕಾರದಿಂದ ಕೂಡಿದ ನೃತ್ಯವು ಎಲ್ಲರ ಮನರಂಜಿಸಿತು.

Exit mobile version