Site icon Suddi Belthangady

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರಿಗೆ ಗೌರವಾರ್ಪಣೆ

ಕಳೆಂಜ: ಗ್ರಾಮದ ಪಟ್ಟೆರಿ ಮನೆಯಿಂದ ಆಯ್ಕೆಯಾಗಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ಅವರು ಆ.31ರಂದು ತಮ್ಮ ಸ್ವಗ್ರಾಮದ ಪಟ್ಟೆರಿ ಮನೆಗೆ ಆಗಮಿಸಿದರು. ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯಿಂದ ಗೌರವಾರ್ಪಣೆ ನಡೆಯಿತು.

ಗೌರವ ಸ್ವೀಕರಿಸಿ ಧರ್ಮಧ್ಯಕ್ಷರು ಮಾತನಾಡುತ್ತಾ, “ದೇವರ ಅನುಗ್ರಹದಿಂದ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು, ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂಬುದು ಸಂತೋಷದ ಸಂಗತಿ. ನಾವು ಎಲ್ಲರೂ ವಿಭಿನ್ನ ಜಾತಿಗಳವರಾಗಿದ್ದರೂ, ನೀವು ಎಲ್ಲರೂ ಬಂದು ಗೌರವಿಸಿದಿದ್ದು ಹೃದಯಂಗಮವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ತಮ್ಮ ಆಶೀರ್ವಾದಗಳನ್ನು ನೀಡಿದರು. ಬಳಿಕ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ಸಂತೋಷ್ ಜೈನ್, ಟಿ.ಎಸ್. ನಿತ್ಯಾನಂದ ರೈ, ಧನಂಜಯ ಗೌಡ, ಶ್ರೀಧರ್ ರಾವ್, ಅಕ್ಷತ್ ರೈ, ಜೈಸನ್ ಪಟ್ಟೆರಿ, ರಾಜೇಶ್ ಶೆಟ್ಟಿ, ವೀರೇಂದ್ರ ಜೈನ್, ಸಂಜೀವ ದೇವಾಡಿಗ, ವಿನೋದ್ ಎಸ್., ಪ್ರೇಮ ಬಿ.ಎಸ್., ಗಂಗಾಧರ ಗೌಡ, ಸೀನಪ್ಪ ಗೌಡ ಸೇರಿದಂತೆ ಹಲವರು ಜೆಸಿ ಸದಸ್ಯರು, ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Exit mobile version