Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಸಹಕಾರಿ ಸೊಸೈಟಿ ಮಹಾಸಭೆ-ರೂ. 1.12ಕೋಟಿ ಲಾಭ-ಶೇ.25 ಡಿವಿಡೆಂಡ್

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ 107.46 ಕೋಟಿ ರೂ. ವ್ಯವಹಾರ ನಡೆಸಿ, ವರ್ಷಾಂತ್ಯಕ್ಕೆ ಶೇ.97 ಸಾಲ ವಸೂಲಾತಿ ಮಾಡಿ 1.12 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಲೆನ್ಸಿ ಪಿಂಟೊ ಹೇಳಿದರು.

ಆ.31ರಂದು ಸೇಕ್ರೆಡ್ ಹಾಟ್೯ ಸಭಾಭವನದಲ್ಲಿ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ. ಅತ್ಯುತ್ತಮ ಲಾಭ ಗಳಿಸಿದೆ. ಆರ್ಥಿಕ ವರ್ಷದ ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ಎ ವರ್ಗದ ಮಾನ್ಯತೆ ಪಡೆದಿದೆ. ಈ ಸಾಧನೆಗೆ ಬೆನ್ನೆಲುಬಾಗಿರುವ ಸಂಘದ ಸದಸ್ಯರು, ಪ್ರಾಮಾಣಿಕ ಸಿಬ್ಬಂದಿ, ಅತ್ಯುತ್ತಮ ಆಡಳಿತ ಮಂಡಳಿಯ ಸಹಕಾರದಿಂದ ಸಾಧ್ಯವಾಗಿದೆ. ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಅತೀ ಅಗತ್ಯ ಸಭಾಂಗಣ ನಿರ್ಮಾಣಕ್ಕೆ ರೂ 25ಲಕ್ಷ ನೀಡಲಾಗುವುದು ಎಂದು ಹೇಳಿದರು. ಸಂಘಕ್ಕೆ ರೂ 1.25ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ಖರೀದಿಸಿ ಅಸ್ತಿ ಮೌಲ್ಯ 3.50ಕೋಟಿ ಆಗಿರುತ್ತದೆ.

ಸಂಘದಿಂದ ಸೆಕ್ರೆಡ್ ಹಾರ್ಟ್ ಮಹಾ ವಿದ್ಯಾಲಯದ ಕ್ರೀಡಾ ಚಟುವಟಿಕೆಗೆ ರೂ 1ಲಕ್ಷ ಮೊತ್ತದ ಚೆಕ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೆರಾ ಅವರಿಗೆ ಹಸ್ತಾಂತರಿಸಿದರು. ಅನಾರೋಗ್ಯ ಪೀಡಿತರಿಗೆ, ಅವಶ್ಯಕತೆಗಳಿಗೆ, ಬಡ ಮಕ್ಕಳ ಶಾಲಾ ಪೀಸ್ ಕಟ್ಟಲು, ಉನ್ನತ ವೈದ್ಯಕೀಯವಿದ್ಯಾಭ್ಯಾಸಕ್ಕೆ ಆರ್ಥಿಕ, ನೆರವು ನೀಡಲಾಯಿತು.

ಗೌರವಧ್ಯಕ್ಷ ಫಾ. ಲಾರೆನ್ಸ್ ಮಸ್ಕೇರೆನ್ಹಸ್, ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ. ಸ್ಟಾನಿ ಗೋವಿಯಸ್, ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರು, ವೃತ್ತಿಪರ ನಿರ್ದೇಶಕ ಲಿಯೋ, ನೋರೋನ್ಹ ಮತ್ತು ಫೆಲಿಕ್ಸ್ ಡಿಕೊಸ್ತಾ, ನಿರ್ದೇಶಕರಾದ ಎಲ್.ಎಂ. ಸಿರಿಲ್ ಸಿಕ್ವೆರಾ, ವಿವೇಕ್ ವಿನ್ಸ್ಸೆಂಟ್ ಪಾಯ್ಸ್, ಜೋಯಲ್ ಗಾಡ್ ಫ್ರೀ ಮೆಂಡೋನ್ಸಾ, ಲಿಯೋ ರೊಡ್ರಿಗಸ್, ಗ್ರೆಗೊರಿ ಸೆರಾ, ರೊನಾಲ್ಡ್ ಸಿಕ್ವೆರಾ, ಫ್ರಾನ್ಸಿಸ್ ವಿ. ವಿ., ಸೆಲೆಸ್ಟಿನ್ ಡಿ’ಸೋಜಾ, ಗ್ರೇಸಿ ರೀಟಾ ರೆಬೆಲ್ಲೊ, ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಲೇರಿಯನ್ ಡಿಸೋಜ ವರದಿ ವಾಚಿಸಿದರು. ಸಂಘದ ಗೌರವಧ್ಯಕ್ಷ ಫಾ. ಲಾರೆನ್ಸ್ ಮಸ್ಕರೆನ್ಹಸ್, ಸಂಘದ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರು, ಸೆಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಕ ಡಾ. ಪ್ರಕಾಶ್ ಡಿಸೋಜಾ, ಮಾಜಿ ನಿರ್ದೇಶಕರಿಗೆ ಸನ್ಮಾನಿಸಲಾಯಿತು. ಮಡಂತ್ಯಾರು ಸೆಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆ ಗಳಲ್ಲಿ ವೈಯುಕ್ತಿಕ ಕ್ರೀಡೆಯಲ್ಲಿ ಪದಕಗಳಿಸಿದ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಸಿಬ್ಬಂದಿ ಡೋನ್ ಪ್ರವೀಣ್ ಕ್ರಾಸ್ತಾ, ಶ್ವೇತಾ ರಾವ್, ಜೀವನ್, ರಮೇಶ್ ಬಿ. ಆರ್. ಹಾಗೂ ಅಲ್ವಿನ್ ಪಿಂಟೊ ಸಹಕರಿಸಿದರು. ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮಗುರು ಲೇರಿನ ಪಿಂಟೊ,ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ದೀಪಕ್ ಡೆಸಾ, ಸೇಕ್ರೆಡ್ ಹಾರ್ಟ್ ಮಹಾ ವಿದ್ಯಾಲಯದ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೆರಾ, ಸಂಘದ ಕಾನೂನು ಸಲಹೆಗಾರರಾದ ಎಲೋಸಿಯಸ್ ಲೋಬೊ, ಪಾಲನ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್, ಆಂಟೋನಿ ಬ್ರಾಗ್ಸ್ ಮೊದಲಾದವರು ಭಾಗವಹಿಸಿದ್ದರು.

ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರು ಮಾತನಾಡಿ, ಸೊಸೈಟಿ ಪ್ರಾರಂಭಗೊಂಡು ಸತತ 8 ವರ್ಷದಿಂದ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡುತ್ತಿರುವುದು ಸಂತಸದ ವಿಚಾರ. ಗ್ರಾಹಕರ ವಿಶ್ವಾಸಾರ್ಹ ಸೊಸೈಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಚಿಂತನೆಗಳು ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಫಾ.ಲಾರೆನ್ಸ್ ಮಸ್ಕರೇನ್ಸಸ್ ಮಾತನಾಡಿ, ಶಿಸ್ತು ಬದ್ಧತೆ, ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿ. ಸದೃಢ ಸಮಾಜದ ಉದ್ದೇಶದಿಂದ ಸೊಸೈಟಿ ಪ್ರಾರಂಭಗೊಂಡಿದ್ದು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆ ಸಮಾಜದಲ್ಲಿ ಮಾದರಿದಾಯಕವಾಗಿ ಮುನ್ನಡೆಯಲಿ. ನಿಸ್ವಾರ್ಥ ಭಾವದಿಂದ ಕೆಲಸ ಮಾಡಿದರೆ ಭಗವಂತ ಪ್ರತಿಫಲ ನೀಡುತ್ತಾರೆ. ಸದಸ್ಯರ ನಂಬಿಕೆ- ವಿಶ್ವಾಸದಿಂದ ಸಂಸ್ಥೆ ಬೆಳೆದಿದ್ದು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಅಭಿನಂದನೀಯ ಎಂದು ಹೇಳಿದರು.

ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಸ್ವಾಗತಿಸಿ, ರೋಬಿನ್ ಸೇರಾ ನಿರೂಪಿಸಿದರು. ಲಿಯೋ ರೊಡ್ರಿಗಸ್ ವಂದಿಸಿದರು.

Exit mobile version