ಇಂದಬೆಟ್ಟು: ಗ್ರಾಮ ಪಂಚಾಯತಿನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆ. 30ರಂದು ಜರುಗಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಶಿಕ್ಷಣಾಧಿಕಾರಿ ತಾರಕೇಸರಿ ಆಗಮಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು. ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷೆ ಆಶಾಲತಾ ವಹಿಸಿದ್ದರು.
ವಿವಿಧ ಇಲಾಖೆಯ ಯೋಜನೆ ಕುರಿತು ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ನಿವೃತ್ತ ದೈಹಿಕ ಶಿಕ್ಷಕಿ ರೇವತಿ ಅವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ ಬಿ.ಪಿ. ಸ್ವಾಗತಿಸಿದರು. ಕಳೆದ ಗ್ರಾಮಸಭೆಯ ನಡವಳಿ ಬಗ್ಗೆ ಅನುಪಾಲನಾ ವರದಿ, ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆ ಬಗ್ಗೆ ವಿವರ ನೀಡಿದರು. ಜಮಾ -ಖರ್ಚಿನ ವಿವರವನ್ನು ಸಿಬ್ಬಂದಿ ಅನಿತಾ ನೀಡಿದರು.