ಬೆಂಗಳೂರು: ಇಲ್ಲಿನ ದಾಸರಹಳ್ಳಿ ಮಲ್ಲಸಂದ್ರ ಪೈಪ್ ಲೈನ್ ನ ಬಿಹೆಚ್ ಈ ಎಲ್ ಮಿನಿ ಕಾಲೋನಿಯಲ್ಲಿರುವ ಜಯಂತ್ ಎಂಬಾತನ ಬಾಡಿಗೆ ಮನೆಯಲ್ಲಿ ಬುರುಡೆ ಚಿನ್ನಯ್ಯನ ಮಹಜರು ಕಾರ್ಯ ಆರಂಭಗೊಂಡಿದೆ.
ದಾಸರಹಳ್ಳಿ ಮಲ್ಲಸಂದ್ರ ಪೈಪ್ ಲೈನ್ ರಸ್ತೆಯ BHEL ಮಿನಿ ಕಾಲೋನಿಯಲ್ಲಿರುವ ನಿವಾಸಕ್ಕೆ ಚಿನ್ನಯ್ಯನನ್ನು ಕರೆತಂದು ಎಸ್. ಐ. ಟಿ ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ. ಮಹಜರು ಸ್ಥಳದಲ್ಲಿ ಬಾಗಲಗುಂಟೆ ಪೊಲೀಸರಿಂದ ಭದ್ರತೆ ಒದಗಿಸಿದ್ದಾರೆ.