Site icon Suddi Belthangady

ಬರೆಂಗಾಯ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

ನಿಡ್ಲೆ: ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.29ರಂದು ಬರೆಂಗಾಯ ಕಲ್ಕುಡಗುಡ್ಡೆ ನಾಗವೇಣಿ ಅಮ್ಮ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ ವಹಿಸಿ ಮಾತನಾಡಿ ಸದಸ್ಯರಿಗೆ ಶೇ. 7ಡಿವಿಡೆಂಟ್ ಹಾಗೂ ಶೇ. 65ರಷ್ಟು ಬೋನಸ್ ನೀಡುವುದಾಗಿ ತಿಳಿಸಿದರು.

ದ.ಕ. ಹಾಲು ಒಕ್ಕೂಟ ಪಶು ವೈದ್ಯಾಧಿಕಾರಿ ಡಾ| ಗಣಪತಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್, ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸಂದೀಪ್ ಜೈನ್‌ ಉಪಸ್ಥಿತರಿದ್ದರು.

ಈ ವೇಳೆ ಸ್ಥಳ ದಾನಿಗಳಾದ ಹೊನ್ನಪ್ಪ ಗೌಡ ಮೆರ್ಲ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ನಿರಂಜನ್, ಚೆನ್ನಪ್ಪ ದೇವಾಡಿಗ, ಮುಕುಂದ ದೇವದಾರ್, ಶಿವಪ್ರಸಾದ್, ಹೇಮಂತ ಗೌಡ, ಅಣ್ಣುಗೌಡ, ಶಶಿಕಲಾ, ಗೀತಾ ಎಂ.ಕೆ., ಸುಮನ, ಹಾಲು ಪರೀಕ್ಷಕ ಶೇಖರ ಗೌಡ, ಸಹಾಯಕಿ ಪರಮೇಶ್ವರಿ, ಕೈಗ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಗಾಯತ್ರಿ ಹೆಚ್. ಗೌಡ ಪ್ರಾರ್ಥಿಸಿ, ನಿರ್ದೇಶಕ ರುಕ್ಕಯ್ಯ ಪೂಜಾರಿ ಸ್ವಾಗತಿಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಶಾಜಿ ತೋಮಸ್ ವರದಿ ವಾಚಿಸಿ, ವಂದಿಸಿದರು.

Exit mobile version