ಸವಣಾಲು: ಸವಣಾಲು ಬದ್ರಿಯಾ ಜುಮಾ ಮಸೀದಿಯಲ್ಲಿ ಸೈಯದ್ ಅಲ್ ಹಾದಿ ಮಲ್ಜಹ್ ತಂಗಲ್ ಅವರ ಗೌರವಾಧ್ಯಕ್ಷತೆಯಲ್ಲಿ ಆಗಸ್ಟ್ 22 ರಂದು ಮಹಾಸಭೆ ಮತ್ತು ನೂತನ ಆಡಳಿತ ಸಮಿತಿ ರಚನಾ ಕಾರ್ಯಕ್ರಮ ಸಭೆ ನೆರವೇರಿತು. ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಡಿ. ರಫೀಕ್ ಮತ್ತು ಎಂ.ಜಿ. ತಲ್ಹತ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ದರ್ಕಾಸ್, ಜೊತೆ ಕಾರ್ಯದರ್ಶಿಗಳಾಗಿ ರಮ್ಲಾನ್ ಮತ್ತು ಎಂ. ಮುಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಜಿ ಮುಹಮ್ಮದ್ ಅಶ್ರಫ್ ಫೈಝಿ .ಲೆಕ್ಕ ಪರಿಶೋಧಕರಾಗಿ ಡಿ. ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಜಿ. ಇಸುಬು, ಡಿ. ಹಸನಬ್ಬ QTF, ಎಸ್.ಎ. ಮುಹಮ್ಮದ್ ಅಲಂಬು, ಡಿ. ಮುಹಮ್ಮದ್, ಸುಲೈಮಾನ್ ಲತೀಫಿ, ಬಿ ಇಸುಬು, ಸಿ.ಎಂ. ಇಬ್ರಾಹಿಂ, ಕೆ. ಅಹ್ಮದ್, ಎಚ್. ಹಮೀದ್, ಕೆ. ಮುತ್ತಲಿಬ್, ಮುಹಮ್ಮದ್ ಇರ್ಫಾನ್, ಶಫೀಕ್ ಮಂಜದಬೆಟ್ಟು, ಡಿ ಬಾಯಿಸ್ ಸಮಿತಿಗೆ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು, ಪ್ರತಿ ಮೂರು ತಿಂಗಳಿಗೊಮ್ಮೆ ಜಲಾಲಿಯಾ ರತೀಬ್ ಕಾರ್ಯಕ್ರಮವನ್ನು ಮಸೀದಿಯಲ್ಲಿ ಆಡಳಿತ ಸಮಿತಿಯ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಮೊದಲ ಕಾರ್ಯಕ್ರಮ ಸೆ. 5 ರಂದು ನಡೆಸಲು ನಿರ್ಧರಿಸಲಾಯಿತು.
ಜಮಾತ್ ಉಪಾಧ್ಯಕ್ಷ ಎಂ.ಜಿ. ತಲ್ಹತ್ ಸ್ವಾಗತಿಸಿ, ಕಳೆದ ಮೂರು ವರ್ಷದ ಚಟುವಟಿಕೆಗಳ ವಿವರ ಮಂಡಿಸಿದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ದರ್ಕಾಸ್ ಮತ್ತು ಸದಸ್ಯ ರಮ್ಲಾನ್ ಅವರು ಲೆಕ್ಕಪತ್ರಗಳನ್ನು ಪ್ರಸ್ತುತಪಡಿಸಿದರು. ಜಮಾತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗೌರವಾಧ್ಯಕ್ಷರಾದ ಮಲ್ಜಹ್ ತಂಗಲ್ ಅವರು ಸಭೆಗೆ ಮಾರ್ಗದರ್ಶನ ನೀಡಿ, ಎಲ್ಲ ಲೆಕ್ಕಪತ್ರಗಳು ಮತ್ತು ವರದಿಗಳನ್ನು ಒಮ್ಮತದಿಂದ ಅಂಗೀಕರಿಸಿದರು. ಮಹಾ ಸಭೆಯಲ್ಲಿ ಉಸ್ತಾದರಾದ ರಿಯಾಜ್ ಸಹಾದಿ ಮತ್ತು ಮಲ್ಜಹ್ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಶರೀಫ್ ಬೆರ್ಕಲ, ಜಮಾತ್‌ನ ಎಲ್ಲಾ ಸದಸ್ಯರು, ಹಿರಿಯರು ಮತ್ತು ಜಮಾತ್ ಖತೀಬ್ ಉಸ್ತಾದರು ಭಾಗವಹಿಸಿದ್ದರು. ಮುಹಮ್ಮದ್ ಅಶ್ರಫ್ ಫೈಝಿ ಧನ್ಯವಾದಗೈದರು.