ಬೆಳ್ತಂಗಡಿ: ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ಕೇಶವ ಪ್ರಸಾದ್ ಮುಳಿಯ, ಕೃಷ್ಣ ನಾರಾಯಣ ಮುಳಿಯ ಇವರ ಮಾತೃಶ್ರೀಯವರಾದ ಸುಲೋಚನಾ ಶ್ಯಾಮ್ ಭಟ್ ಇವರು ಆ. 28ರಂದು ವಿಧಿವಶರಾಗಿದ್ದಾರೆ. ಈ ಗೌರವಾರ್ಥ ಮುಳಿಯ ಸಂಸ್ಥೆಯ ಎಲ್ಲಾ ಶಾಖೆಗಳಿಗೆ ಆ.29ರಂದು ರಜೆ ನೀಡಲಾಗಿದೆ ಎಂದು ಮುಳಿಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುಳಿಯ ಕುಟುಂಬದ ಬದುಕಿನ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಮಾರ್ಗದರ್ಶನ ಮತ್ತು ಸ್ಪೂರ್ತಿದಾಯಕ ಮಾತುಗಳಿಂದ ಪ್ರೋತ್ಸಾಹಿಸಿರುವ ಸುಲೋಚನಾ ಶ್ಯಾಮ್ ಭಟ್ ಅವರು ಮಕ್ಕಳಾದ ಕೇಶವ ಪ್ರಸಾದ್ ಮುಳಿಯ, ಡಾ ವಿದ್ಯಾ ಸರಸ್ವತಿ, ಕೃಷ್ಣ ನಾರಾಯಣ ಮುಳಿಯ, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಅಳಿಯ ಶ್ಯಾಮ್ ಸುಂದರ್, ಮೊಮ್ಮಕ್ಕಳಾದ ಅತುಲ್ ತೇಜಸ್ವಿ, ಆದ್ಯ ಸುಲೋಚನಾ, ಇಶಾ ಸುಲೋಚನಾ, ಅಪೂರ್ವ ಮನಸ್ವಿನಿ, ಮುಕುಂದ ಶ್ಯಾಮ್, ಆಪ್ತ ಚಂದ್ರಮತಿಯವರನ್ನು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.