ಶಿಬಾಜೆ: ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಶಿಬಾಜೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ, ಶ್ರೀ ಭುವನೇಶ್ವರಿ ಭಜನಾ ಮಂಡಳಿ ಬೂಡದಮಕ್ಕಿ, ಗ್ರಾಮದ ದೇವಸ್ಥಾನಗಳ ಸಮಿತಿ ಇವರ ಸಹಭಾಗಿತ್ವದಲ್ಲಿ ಶಿಬಾಜೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆಯು ಆ. 29ರಂದು ನಡೆಯಿತು.
ಜಾತ್ರೆಯಲ್ಲಿ ಭವ್ಯವಾದ ರಥದ ಜೊತೆ ಶಿಬಾಜೆ ಗ್ರಾಮದ ಜನತೆಯು ಧರ್ಮಸ್ಥಳದ ಕಡೆ ವಾಹನಗಳ ಮೂಲಕ ಸಾಗಿ ಅಲ್ಲಿಂದ ಪಾದಯಾತ್ರೆಯ ಮೂಲಕ ದೇವಸ್ಥಾನ ತಲುಪಿ ಅಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯಲಿದ್ದಾರೆ. ಮಂಟಪ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರುಗಳು ಅನೇಕ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದ್ದರು.