ಬೆಳಾಲು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಬೆಳಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ಮತ್ತು ಬೆಳಾಲಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಊರವರ ಆಶ್ರಯದಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ. 27ರಂದು ಬೆಳಾಲು ಶ್ರೀ ಧ. ಮಾ. ಪ್ರೌಢ ಶಾಲೆಯಲ್ಲಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಿಗ್ಗೆ ನಂದಾದೀಪ ಬೆಳಗಿಸಿ ಮಹಾಗಣಪತಿ ದೇವರ ಪ್ರತಿಷ್ಠೆ ನಡೆಯಿತು.
ನಂತರ ಅನಂತೋಡಿ ಪದ್ಮನಾಭ ಮಹಿಳಾ ಕುಣಿತ ಭಜನಾ ತಂಡ, ಕೊಲ್ಪಾಡಿ ಶ್ರೀ ಸುಬ್ರಹ್ಮನ್ಯೆಶ್ವರ ಭಜನಾ ಮಂಡಳಿ ಅನಂತೋಡಿ ಶ್ರೀ ಅನಂತೇಶ್ವರಭಜನಾ ಮಂಡಳಿ, ಮಾಯ ಮಹೇಶ್ವರ ಭಜನಾ ಮಂಡಳಿ, ಮಾಯ ಮಹೇಶ್ವರ ಮಹಿಳಾ ಭಜನಾ ತಂಡ, ಬೆಳಾಲು ಸರಸ್ವತಿ ಭಜನಾ ತಂಡ, ಬೆಳಾಲು ಶ್ರೀ ಕಾಳಿ ಕಾಂಬ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಅನ್ನದಾನದ ಸೇವಾ ಕರ್ತರಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಡೆಕೋರೇಟರ್ಮಾಲಕ ಪ್ರವೀಣ್, ಈ ಬಾರಿಯ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆ ಗೈದ ಬೆಳಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಮನಶ್ರೀ, ಮನಸ್ವಿ, ಸಮೀಕ್ಷಾ, ಇಂದುಮತಿ, ಲಿಖಿತಾ, ಲೋಕೇಶ್, ಪ್ರಕ್ಷಶಿತ್ ಕುಮಾರ್, ತುಳಸಿ ಪ್ರಸಾದ್, ಚೇತನ ಎಸ್., ಸೌಜನ್ಯ ಆರಿಕೋಡಿ, ರಕ್ಷಾ,
ಅವರನ್ನು ಸಮಿತಿಯಿಂದ ಗೌರವಿಸಲಾಯಿತು.
ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಯೋಜನೆಯ ಮೇಲ್ವಿಚಾರಕಿ ಪೂರ್ಣಿಮಾ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ ಪಾರಳ, ಕಾರ್ಯದರ್ಶಿ ಹರೀಶ್ ಆಚಾರ್ಯ, ಸಂಚಾಲಕ ಸತೀಶ್ ಗೌಡ ಎಳ್ಳುಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯಆಚಾರ್ಯ ವಹಿಸಿದ್ದರು. ಅನಂತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಯೋಗೀಶ್ ಗೌಡ ಎಸ್., ಜಾರಪ್ಪ ಗೌಡ ಆರಣೆಮಾರು, ಸೀತಾರಾಮ ಬಿ. ಎಸ್., ಭವಾನಿ ಮಾರ್ಪಲು, ಪೆರಣ ಗೌಡ ಪರಾರಿ, ಗಣೇಶ್ ಕನಿಕ್ಕಿಲ, ಸಂತೋಷ್ ಕುದ್ದಂಟೆ, ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ದಿವಾಕರ ಆಚಾರ್ಯ, ಉಪಾಧ್ಯಕ್ಷ ರತ್ನಾಕರ ಆಚಾರ್ಯ, ಸೇವಾ ಪ್ರತಿನಿಧಿಗಳಾದ ತಾರಾನಾಥ ಗೌಡ, ಪ್ರಭಾವತಿ, ಪ್ರಮೀಳಾ ಸಮಿತಿ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದು ಸಹಕರಿಸಿದರು.
ಸಮಿತಿಯ ಗೌರವಾಧ್ಯಕ್ಷ ಶಿವ ಕುಮಾರ್ ಬಾರಿತ್ತಾಯ ಸ್ವಾಗತಿಸಿ, ಶಿವಪ್ರಸಾದ್ ಕಪ್ಪೆಹಳ್ಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ನಿರೂಪಿಸಿದರು. ಸಂಜೆ ವಿಸರ್ಜನಾ ಪೂಜೆ ನಡೆದು ವಿವಿಧ ಕುಣಿತ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ವೈಭವದ ಶೋಭಾಯಾತ್ರೆ ನಡೆದು ಮೂರ್ತಯ ವಿಸರ್ಜನೆ ನಡೆಯಿತು. ಸಂಚಾಲಕ ಸತೀಶ್ ಗೌಡ ಎಳ್ಳುಗದ್ದೆ ವಂದಿಸಿದರು.