ಬೆಳ್ತಂಗಡಿ: ಎಸ್‌ಐಟಿ ಕಚೇರಿಗೆ ಸೌಜನ್ಯಾ ತಾಯಿ ಕುಸುಮಾವತಿ ಆಗಮಿಸಿ, ಚಿನ್ನಯ್ಯನ ವಿರುದ್ಧ ದೂರು ದಾಖಲಿಸಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ಚಿನ್ನಯ್ಯನನ್ನು ತನಿಖೆಗೆ ಒಳಪಡಿಸುವಂತೆ ಕುಸುಮಾವತಿ ತಮ್ಮ ದೂರಿನಲ್ಲಿ ಕೋರಿದ್ದಾರೆ.
2012ರಲ್ಲಿ ಸೌಜನ್ಯಾ ಹತ್ಯೆ ಮತ್ತು ಅತ್ಯಾಚಾರ ಪ್ರಕರಣ ಸಂಭವಿಸಿದಾಗ ಚಿನ್ನಯ್ಯ ಅಲ್ಲಿ ಕೆಲಸ ಮಾಡುತ್ತಿದ್ದ. ಆತ, ಸೌಜನ್ಯಾ ಹೆಣವನ್ನು ಹೊತ್ತುಕೊಂಡು ಹೋಗಿರುವುದನ್ನು ತಾನು ಕಂಡಿದ್ದಾಗಿ ಯೂಟ್ಯೂಬ್ ಸಂದರ್ಶನದಲ್ಲಿ ತಿಳಿಸಿದ್ದ. ಈ ಕಾರಣದಿಂದ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಕುಸುಮಾವತಿ ತಮ್ಮ ದೂರಿನಲ್ಲಿ ಕೋರಿದ್ದಾರೆ. ಚಿನ್ನಯ್ಯ ಈ ಹೇಳಿಕೆಯನ್ನು ಎಸ್‌ಐಟಿಗೆ ಪ್ರಕರಣ ಹಸ್ತಾಂತರವಾಗುವ ಮೊದಲು ಯೂಟ್ಯೂಬ್ ಸಂದರ್ಶನವೊಂದರಲ್ಲಿ ನೀಡಿದ್ದ ಎಂದು ತಿಳಿದುಬಂದಿದೆ.