Site icon Suddi Belthangady

ಅಳದಂಗಡಿ: ಪ್ರೌಢ ಶಾಲಾ ವಿಭಾಗದ ಖೋ ಖೋ ಪಂದ್ಯಾಟ ಉದ್ಘಾಟನೆ

ಅಳದಂಗಡಿ: ಸರಕಾರಿ ಪ್ರೌಢ ಶಾಲೆಯಲ್ಲಿ 2025-26ನೇ ಸಾಲಿನ ನಾರಾವಿ ವಲಯ ಮಟ್ಟದ 17ರ ವಯೋಮಾನದ ಪ್ರೌಢ ಶಾಲಾ ವಿಭಾಗದ ಖೋ ಖೋ ಪಂದ್ಯಾಟವನ್ನು ಅಳದಂಗಡಿ ಅರಮನೆಯ ಶಿವ ಪ್ರಸಾದ್ ಅಜಿಲರು ಉದ್ಘಾಟನೆ ಮಾಡಿ ಶುಭಾ ಹಾರೈಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಅವರು ಅಧ್ಯಕ್ಷಿಯ ಭಾಷಣ ಮಾಡಿದರು. ವೇದಿಕೆಯಲ್ಲಿ ವಲಯ ನೋಡೆಲ್ ಅಧಿಕಾರಿ ರಾಜೇಂದ್ರ ಬಲ್ಲಾಳ್ ಅವರು ಪಂದ್ಯಾಟದ ಬಗ್ಗೆ ತಿಳಿಸಿದರು. ಎಸ್. ಡಿ. ಎಮ್. ಸಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಗಣ್ಯರನ್ನು ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಮರಿಯಾ ಸಾಲ್ದಾನ ಅವರು ಸ್ವಾಗತಿಸಿದರು. ಸಹ ಶಿಕ್ಷಕಿ ಪೂಜಶ್ರೀ ಅವರು ಧನ್ಯವಾದ ಮಾಡಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಪ್ರೇಮಲತಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Exit mobile version