Site icon Suddi Belthangady

ಬಂದಾರು: 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂದಾರು: ಶಿವಗೆಳೆಯರ ಬಳಗ ಮತ್ತು ನವ್ಯಶ್ರೀ ಯುವತಿ ಮಂಡಲ ಮೈರೋಳ್ತಡ್ಕ-ಬಂದಾರು ಇವುಗಳ ಸಂಯುಕ್ತ ಆಶ್ರಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮೈರೋಳ್ತಡ್ಕ ವಠಾರದಲ್ಲಿ ಆ. 27ರಂದು ಅನಂತರಾಮ ಶಬರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಜರುಗಿತು.

ಶಾಸಕ ಹರೀಶ್ ಪೂಂಜ, ಕಿರಣ್ ಚಂದ್ರ ಡಿ. ಪುಷ್ಪಗಿರಿ ಉರುವಾಲು ಅವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಿವಗೆಳೆಯರ ಬಳಗದ ಅಧ್ಯಕ್ಷ ಚಂದಪ್ಪ ಗೌಡ ನಡುಮಜಲು ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ ಮಾಧವ ಗೌಡ ಧಾರ್ಮಿಕ ಭಾಷಣ ಮಾಡಿದರು. ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪ್ರಗತಿ ಪರ ಕೃಷಿಕ ಚೆನ್ನಪ್ಪ ಗೌಡ ಪಾಂಜಾಳ ಉಪಸ್ಥಿತರಿದ್ದರು. ಮುಗೇರಡ್ಕ ನೇತ್ರಾವತಿ ನದಿಕಿನಾರೆಗೆ ಮಕ್ಕಳ ಕುಣಿತ ಭಜನಾ ತಂಡ, ಚೆಂಡೆ ಬಳಗದೊಂದಿಗೆ ವೈಭವ ಪೂರ್ಣ ಮೆರವಣಿಗೆಯೊಂದಿಗೆ ಗಣಪನ ಮೂರ್ತಿ ವಿಸರ್ಜನೆಗೊಂಡಿತು. ಮೈರೋಳ್ತಡ್ಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮದರ್ಶನ ಯಕ್ಷಗಾನ ಬಯಲಾಟ ನಡೆಯಿತು. ಭಕ್ತವೃಂದದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Exit mobile version